ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾರ್‌ಬಕ್ಸ್‌ನಿಂದ ಹೊಸ ಪಾನೀಯ, ಆಹಾರ ಉತ್ಪನ್ನ

Last Updated 16 ಜುಲೈ 2022, 13:08 IST
ಅಕ್ಷರ ಗಾತ್ರ

ಬೆಂಗಳೂರು: ಟಾಟಾ ಸ್ಟಾರ್‌ಬಕ್ಸ್‌ ಕಂಪನಿಯು ಬೆಂಗಳೂರಿನ ಗ್ರಾಹಕರಿಗಾಗಿ ಹೊಸ ಪಾನೀಯಗಳು ಮತ್ತು ಆಹಾರ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.

ಪಿಕ್ಕೊ ಕಪ್‌ ಗಾತ್ರದಲ್ಲಿ ವಿವಿಧ ಪಾನೀಯಗಳು, ದಕ್ಷಿಣ ಭಾರತದ ಫಿಲ್ಟರ್ ಕಾಫಿ, ಮಿಲ್ಕ್‌ ಶೇಕ್‌, ಮಸಾಲ ಚಾಯ್‌, ಏಲಕ್ಕಿ ಚಾಯ್‌ ಮತ್ತು ಬೈಟ್‌ ಸೈಜ್ಡ್‌ ಸ್ನ್ಯಾಕ್ಸ್‌ ಹಾಗೂ ಸ್ಯಾಂಡ್ವಿಚ್‌ಗಳನ್ನು ಬಿಡುಗಡೆ ಮಾಡಿದೆ.

‘ಸ್ಟಾರ್‌ಬಕ್ಸ್‌ನಲ್ಲಿ ಮಾತ್ರವೇ ಗ್ರಾಹಕರ ಹೆಸರನ್ನು ಕಪ್‌ ಮೇಲೆ ಬರೆಯುವುದನ್ನು ಕಾಣಬಹುದು. ಪ್ರತಿ ಬಾರಿಯೂ ಗ್ರಾಹಕರು ಇಷ್ಟಪಡುವ ರೀತಿಯಲ್ಲಿ ಪಾನೀಯ ಸಿದ್ಧಪಡಿಸಿ ನೀಡಲಾಗುತ್ತದೆ’ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

‘ನಮ್ಮ ಸೇವೆಯಲ್ಲಿ ಸ್ಥಳೀಯ ಅಂಶಗಳ ಅಳವಡಿಕೆಗೆ ಹೆಚ್ಚಿನ ಗಮನ ಹರಿಸುತ್ತೇವೆ. ಇದರಿಂದಾಗಿ ಗ್ರಾಹಕರಿಗೆ ಹೆಚ್ಚು ಹತ್ತಿರವಾಗಲು ಸಾಧ್ಯವಾಗುತ್ತದೆ’ ಎಂದು ಟಾಟಾ ಸ್ಟಾರ್‌ಬಕ್ಸ್‌ನ ಸಿಇಒ ಸುಶಾಂತ್‌ ದಾಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT