ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಂಡೈನ ಹೊಸ ಎಸ್‌ಯುವಿ ಟಕ್ಸನ್‌

Last Updated 14 ಜುಲೈ 2020, 17:26 IST
ಅಕ್ಷರ ಗಾತ್ರ

ಹುಂಡೈ ಮೋಟರ್‌ ಇಂಡಿಯಾ ಕಂಪನಿಯು ತನ್ನ ಪ್ರೀಮಿಯಂ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ನ (ಎಸ್‌ಯುವಿ) ಹೊಸ ಅವತರಣಿಕೆ ಟಕ್ಸನ್‌ ಅನಾವರಣಗೊಳಿಸಿದೆ.

ದೆಹಲಿಯಲ್ಲಿ ಎಕ್ಸ್‌ ಷೋರೂಂ ಬೆಲೆ ₹ 22.3 ಲಕ್ಷದಿಂದ ₹ 27.03 ಲಕ್ಷದವರೆಗೆ ಇದೆ.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟಕ್ಸನ್‌ ಮಾದರಿಗೆ ಉತ್ತಮ ಸ್ಪಂದನೆ ದೊರೆತಿದೆ. ಇದುವರೆಗೆ 65 ಲಕ್ಷ ಎಸ್‌ಯುವಿ ಮಾರಾಟವಾಗಿವೆ. ಭಾರತದಲ್ಲಿ ಕ್ರೆಟಾ ಹೊಂದಿರುವ 5 ಲಕ್ಷ ಗ್ರಾಹಕರು ಪ್ರೀಮಿಯಂ ಎಸ್‌ಯುವಿಗೆ ಅಪ್‌ಗ್ರೇಡ್‌ ಆಗಲು ಬಯಸಿದ್ದಾರೆ. ಹೀಗಾಗಿ ಟಕ್ಸನ್‌ ಬಿಡುಗಡೆ ಮಾಡಲು ಇದು ಸೂಕ್ತ ಸಮಯವಾಗಿದೆ. ಹೊಸ ಟಕ್ಸನ್‌ ಬಿಎಸ್‌6ನ ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಕೆಲವು ಮಾರುಕಟ್ಟೆಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರದ ಅಂತರ ಕಡಿಮೆಯಾಗುತ್ತಿದೆ. ಈ ಸಮಯದಲ್ಲಿ ಗ್ರಾಹಕರು ಮೋಜಿನ ಸವಾರಿ ಮತ್ತು ಉತ್ತಮ ಇಂಧನ ದಕ್ಷತೆಗಾಗಿ ಡೀಸೆಲ್‌ ವಾಹನ ಖರೀದಿಸಲಿದ್ದಾರೆ ಎನ್ನುವುದು ನನ್ನ ನಿರೀಕ್ಷೆಯಾಗಿದೆ. ಡೀಸೆಲ್‌ ಎಂಜಿನ್‌ ಕ್ರೆಟಾ, ವರ್ನಾ ಮತ್ತು ವೆನ್ಯೂ ಮಾದರಿಗಳ ಯಶಸ್ಸಿನಿಂದಾಗಿ ಬಿಎಸ್‌6 ಯುಗದಲ್ಲಿಯೂ ಡೀಸೆಲ್‌ ತಂತ್ರಜ್ಞಾನದಲ್ಲಿ ಮುಂದುವರಿಯಲು ಕಂಪನಿ ಬಯಸುತ್ತದೆ‘ ಎಂಬುದು ಕಂಪನಿಯ ನಿರ್ದೆಶಕ ತರುಣ್‌ ಗರ್ಗ್‌ ಅನಿಸಿಕೆಯಾಗಿದೆ.

ಜೂನ್‌ನಲ್ಲಿ ಕ್ರೆಟಾಗಾಗಿ ಕಂಪನಿ ಪಡೆದಿರುವ ಒಟ್ಟಾರೆ ಬುಕಿಂಗ್‌ನಲ್ಲಿ ಡೀಸೆಲ್‌ ಎಂಜಿನ್‌ ಪಾಲು ಶೇ 59ರಷ್ಟಿದೆ.

ವೈಶಿಷ್ಟ್ಯ

2 ಲೀಟರ್‌ ಡೀಸೆಲ್‌ ಎಂಜಿನ್‌, 8 ಸ್ಪೀಡ್‌ ಆಟೊಮೆಟಿಕ್‌ ಟ್ರಾನ್ಸ್‌ಮಿಷನ್‌

2 ಲೀಟರ್‌ ಪೆಟ್ರೋಲ್‌ ಎಂಜಿನ್‌, 6 ಸ್ಪೀಡ್‌ ಆಟೊಮೆಟಿಕ್‌ ಟ್ರಾನ್ಸ್‌ಮಿಷನ್‌

ಪವರ್‌ ಅಡ್ಜೆಸ್ಟೆಬಲ್ ಫ್ರಂಟ್‌ ಸೀಟ್‌

ಪನೋರಮಿಕ್‌ ಸನ್‌ರೂಫ್‌

ವೈರ್‌ಲೆಸ್‌ ಚಾರ್ಜರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT