ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘X’ನಲ್ಲಿ ಲೈಕ್‌ಗೂ ಶುಲ್ಕ!: ದರ ಏರಿಕೆ ಅನಿವಾರ್ಯ ಎಂದ ಇಲಾನ್‌ ಮಸ್ಕ್

Published 16 ಏಪ್ರಿಲ್ 2024, 14:28 IST
Last Updated 16 ಏಪ್ರಿಲ್ 2024, 14:28 IST
ಅಕ್ಷರ ಗಾತ್ರ

ನವದೆಹಲಿ: ‘ಎಕ್ಸ್‌’ ವೇದಿಕೆಯಲ್ಲಿ ಲೈಕ್‌, ಪೋಸ್ಟ್‌, ಬುಕ್‌ಮಾರ್ಕ್‌ ಹಾಗೂ ರಿಪ್ಲೈ ಮಾಡಲು ಇನ್ನು ಮುಂದೆ ಹೊಸ ಖಾತೆದಾರರಿಗೆ ವಾರ್ಷಿಕ ಶುಲ್ಕ ವಿಧಿಸಲು ಉದ್ಯಮಿ ಇಲಾನ್‌ ಮಸ್ಕ್‌ ನಿರ್ಧರಿಸಿದ್ದಾರೆ.

ನಕಲಿ ಖಾತೆಗಳು ಮತ್ತು ಬಾಟ್‌ಗಳನ್ನು (ಜಾಲತಾಣಗಳಲ್ಲಿ ಬಳಕೆಯಾಗುವ ರೋಬೊ) ನಿಯಂತ್ರಿಸುವುದಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಶುಲ್ಕ ಪಾವತಿಸದಿದ್ದರೆ ಬೇರೆಯವರ ಪೋಸ್ಟ್‌ಗಳು ಮತ್ತು ಖಾತೆಗಳನ್ನು ಬ್ರೌಸ್‌ ಮಾಡಲಷ್ಟೇ ಹೊಸ ಬಳಕೆದಾರರಿಗೆ ಅವಕಾಶ ಸಿಗಲಿದೆ.  

ಸೋಮವಾರ ಈ ಕುರಿತು ವೆಬ್‌ಸೈಟ್‌ ಅನ್ನು ಅಪ್‌ಗ್ರೇಡ್‌ ಮಾಡಲಾಗಿದ್ದು, ಶುಲ್ಕ ಪಾವತಿಸುವ ಬಗ್ಗೆ ತಿಳಿಸಲಾಗಿದೆ.

‘ಸ್ಪ್ಯಾಮ್‌ಗೆ ಕಡಿವಾಣ ಹಾಕುವ ಮೂಲಕ ಪ್ರತಿಯೊಬ್ಬರಿಗೂ ಉತ್ತಮ ಸೇವೆ ಒದಗಿಸಲು ಈ ಕ್ರಮ ಅನಿವಾರ್ಯವಾಗಿದೆ’ ಎಂದು ‘ಎಕ್ಸ್‌’ ತಿಳಿಸಿದೆ.

ಈ ಹೊಸ ನಿಯಮವು ಆಯ್ದ ಪ್ರದೇಶಗಳಿಗೆ ಅನ್ವಯಿಸುತ್ತದೆಯೇ ಅಥವಾ ವಿಶ್ವದಾದ್ಯಂತ ಎಲ್ಲ ಹೊಸ ಬಳಕೆದಾರರಿಗೆ ಅನ್ವಯವಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಆದರೆ, ಹೊಸ ಬಳಕೆದಾರರು ಎಷ್ಟು ಶುಲ್ಕ ಭರಿಸಬೇಕಿದೆ ಎಂಬ ಬಗ್ಗೆ ಮಸ್ಕ್‌ ಪ್ರಕಟಿಸಿಲ್ಲ. ಸದ್ಯ ನ್ಯೂಜಿಲೆಂಡ್‌ನಲ್ಲಿ ಹೊಸ ಬಳಕೆದಾರರಿಗೆ ವಾರ್ಷಿಕ ಒಂದು ಡಾಲರ್‌ ಶುಲ್ಕ ವಿಧಿಸಲಾಗುತ್ತಿದೆ.

ಮಸ್ಕ್‌ ಅವರ ಈ ನಿರ್ಧಾರದ ಬಗ್ಗೆ ಅಂತರ್ಜಾಲ ತಾಣದಲ್ಲಿ ಮಿಶ್ರ ‍ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂತರ್ಜಾಲ ಮತ್ತು ಕೃತಕ ಬುದ್ಧಿಮತ್ತೆಯ ದುರ್ಬಳಕೆಗೆ ಕಡಿವಾಣ ಹಾಕಲು ಇದು ಸರಿಯಾದ ನಡೆಯಾಗಿದೆ ಎಂದು ಕೆಲವರು ಹೇಳಿದ್ದರೆ, ಇದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT