ಗುರುವಾರ , ಅಕ್ಟೋಬರ್ 17, 2019
21 °C
ದ್ವಿತೀಯ ತ್ರೈಮಾಸಿಕದಲ್ಲಿನ ಲಾಭ ಶೇ 2.2 ಕುಸಿತ

ಇನ್ಫೊಸಿಸ್‌ ನಿವ್ವಳ ಲಾಭ ₹ 4,019 ಕೋಟಿ

Published:
Updated:
Prajavani

ಬೆಂಗಳೂರು: ದೇಶದ ಎರಡನೆ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆಯಾಗಿರುವ ಇನ್ಫೊಸಿಸ್‌, ದ್ವಿತೀಯ (ಜುಲೈ–ಸೆಪ್ಟೆಂಬರ್‌) ತ್ರೈಮಾಸಿಕದಲ್ಲಿ ₹ 4,019 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿನ ₹ 4,110 ಕೋಟಿಗೆ ಹೋಲಿಸಿದರೆ ಈ ಬಾರಿಯ ನಿವ್ವಳ ಲಾಭವು ಶೇ 2.2ರಷ್ಟು ಕುಸಿತ ಕಂಡಿದೆ.

ಸಂಸ್ಥೆಯ ವರಮಾನವು ಹಿಂದಿನ ವರ್ಷದ ₹ 20,609 ಕೋಟಿಗೆ ಹೋಲಿಸಿದರೆ, ಶೇ 9.8ರಷ್ಟು ಹೆಚ್ಚಳಗೊಂಡು ₹ 22,629 ಕೋಟಿಗೆ ತಲುಪಿದೆ.

‘ವರಮಾನ ಹೆಚ್ಚಳ, ಡಿಜಿಟಲ್‌ ಬೆಳವಣಿಗೆ, ಕಾರ್ಯಾಚರಣೆ ಲಾಭ, ಕಾರ್ಯನಿರ್ವಹಣೆಯ ದಕ್ಷತೆ, ದೊಡ್ಡ ಮೊತ್ತದ ಒಪ್ಪಂದ ವಿಷಯಗಳಲ್ಲಿ ಸಂಸ್ಥೆಯ ಸಾಧನೆ ಉತ್ತಮವಾಗಿದೆ. ಸಂಸ್ಥೆ ತೊರೆಯುವ ಸಿಬ್ಬಂದಿ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ’ ಎಂದು ಸಂಸ್ಥೆಯ ಸಿಇಒ ಸಲಿಲ್ ಪಾರೇಖ್‌ ಅವರು ಹೇಳಿದ್ದಾರೆ.

‘ತನ್ನ ಗ್ರಾಹಕ ಕೇಂದ್ರಿತ ಮತ್ತು ಪಾಲುದಾರರ ಲಾಭ ಹೆಚ್ಚಿಸುವ ವಿಷಯದಲ್ಲಿ ಸಂಸ್ಥೆಯು ಉತ್ತಮ ಪ್ರಗತಿ ದಾಖಲಿಸುತ್ತಿದೆ’ ಎಂದೂ ಅವರು ಹೇಳಿದ್ದಾರೆ.

 

Post Comments (+)