ಗುರುವಾರ , ಆಗಸ್ಟ್ 13, 2020
28 °C

ಖಾದಿ ಆತ್ಮನಿರ್ಭರ ಮಿಷನ್ | ಅಗರಬತ್ತಿ: ಸ್ವಾವಲಂಬನೆಯ ಯೋಜನೆಗೆ ಅಸ್ತು

ಪಿಟಿಐ Updated:

ಅಕ್ಷರ ಗಾತ್ರ : | |

ಅಗರಬತ್ತಿ ಪ್ಯಾಕಿಂಗ್‌ ಮಾಡುತ್ತಿರುವುದು–ಸಾಂದರ್ಭಿಕ ಚಿತ್ರ

ನವದೆಹಲಿ: ಸ್ಥಳೀಯವಾಗಿ ಸಿದ್ಧಪಡಿಸಲಾದ ಯಂತ್ರಗಳನ್ನು ಬಳಸಿ, ತರಬೇತಿ ಪಡೆದ ಕೆಲಸಗಾರರ ನೆರವು ಪಡೆದು ಅಗರಬತ್ತಿ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿ ಆಗಿಸುವ ಯೋಜನೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಅನುಮೋದನೆ ನೀಡಿದ್ದಾರೆ. ಉದ್ಯೋಗ ಸೃಷ್ಟಿಸುವ ಈ ಯೋಜನೆಯ ಪ್ರಸ್ತಾವನೆಯನ್ನು ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಆಯೋಗವು ಸಿದ್ಧಪಡಿಸಿತ್ತು.

ಈ ಯೋಜನೆಗೆ ‘ಖಾದಿ ಆತ್ಮನಿರ್ಭರ ಮಿಷನ್’ ಎಂದು ಹೆಸರಿಡಲಾಗಿದೆ. ನಿರುದ್ಯೋಗಿಗಳಿಗೆ ಮತ್ತು ವಲಸೆ ಕಾರ್ಮಿಕರಿಗೆ ದೇಶದ ವಿವಿಧ ಭಾಗಗಳಲ್ಲಿ ಉದ್ಯೋಗ ಸೃಷ್ಟಿಸುವ, ಕರಕುಶಲಕರ್ಮಿಗಳಿಗೆ ಮಾರ್ಗದರ್ಶನ ನೀಡುವ ಹಾಗೂ ಸ್ಥಳೀಯ ಅಗರಬತ್ತಿ ಉದ್ಯಮಕ್ಕೆ ಬೆಂಬಲ ನೀಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.

ದೇಶದಲ್ಲಿ ಈಗ ಪ್ರತಿದಿನ ಅಂದಾಜು 1,490 ಮೆಟ್ರಿಕ್ ಟನ್ ಅಗರಬತ್ತಿ ಬಳಸಲಾಗುತ್ತಿದೆ. ಆದರೆ, ದೇಶದಲ್ಲಿ ಉತ್ಪಾದನೆ ಆಗುವ ಅಗರಬತ್ತಿಯ ಪ್ರಮಾಣ ದಿನವೊಂದಕ್ಕೆ 670 ಮೆಟ್ರಿಕ್ ಟನ್ ಮಾತ್ರ. ಕೊರತೆ ಪ್ರಮಾಣವನ್ನು ಚೀನಾ ಮತ್ತು ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

ಈ ಯೋಜನೆಯನ್ನು ಆರಂಭಿಕ ಹಂತದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತದೆ. ‘ಅಗರಬತ್ತಿ ಉತ್ಪಾದನೆಯಲ್ಲಿ ಬಳಕೆಯಾಗುವ ಎಲ್ಲ ಯಂತ್ರಗಳನ್ನು ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ’ ಎಂದು ಆಯೋಗದ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೇನಾ ತಿಳಿಸಿದರು. ಭಾರತದಲ್ಲಿ ಸಿದ್ಧಗೊಳ್ಳುವ ಯಂತ್ರಗಳನ್ನು ಮಾತ್ರ ಈ ಯೋಜನೆಯ ಅಡಿ ತರಿಸಿಕೊಳ್ಳಲು ಆಯೋಗ ತೀರ್ಮಾನಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು