ಶನಿವಾರ, ಜುಲೈ 24, 2021
23 °C

ಕಲ್ಲಿದ್ದಲು ಗಣಿಗಾರಿಕೆ: ನೀರಸ ಪ್ರತಿಕ್ರಿಯೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಚೆನ್ನೈ: ಕೇಂದ್ರ ಸರ್ಕಾರವು ಮಾರಾಟಕ್ಕೆ ಮುಕ್ತವಾಗಿಸಿರುವ 67 ಕಲ್ಲಿದ್ದಲು ಗಣಿಗಳ ಪೈಕಿ 48 ಗಣಿಗಳ ಖರೀದಿಗೆ ಯಾರೂ ಬಿಡ್ ಸಲ್ಲಿಸಿಲ್ಲ. ಲಾಭದ ಪ್ರಮಾಣ ಕಡಿಮೆ ಇರುವ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಖಾಸಗಿ ಕಂಪನಿಗಳಿಗೆ ಹೆಚ್ಚಿನ ಆಸಕ್ತಿ ಇಲ್ಲ ಎಂಬುದನ್ನು ಇದು ತೋರಿಸುತ್ತಿದೆ.

ವಿಶ್ವದಲ್ಲಿನ ನಾಲ್ಕನೆಯ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪ ಭಾರತದಲ್ಲಿ ಇದೆ. ಕಲ್ಲಿದ್ದಲು ಆಮದು, ಉತ್ಪಾದನೆ ಹಾಗೂ ಬಳಕೆಯಲ್ಲಿ ಭಾರತವು ಎರಡನೆಯ ಸ್ಥಾನದಲ್ಲಿ ಇದೆ.

ಕಲ್ಲಿದ್ದಲು ಗಣಿಗಾರಿಕೆಗೆ ತಾಂತ್ರಿಕ ಬಿಡ್ ಸಲ್ಲಿಸಲು ಶುಕ್ರವಾರ ಕಡೆಯ ದಿನವಾಗಿತ್ತು. 67 ಗಣಿಗಳ ಪೈಕಿ 19 ಗಣಿಗಳ ಖರೀದಿಗೆ ಮಾತ್ರ ಬಿಡ್ ಸಲ್ಲಿಕೆಯಾಗಿದೆ ಎಂದು ಕಲ್ಲಿದ್ದಲು ಸಚಿವಾಲಯ ಹೇಳಿದೆ. ಎಂಟು ಗಣಿಗಳಿಗೆ ಮಾತ್ರ ಒಂದಕ್ಕಿಂತ ಹೆಚ್ಚು ಬಿಡ್ ಸಲ್ಲಿಕೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು