ಭಾನುವಾರ, ಏಪ್ರಿಲ್ 11, 2021
32 °C

ಸತತ 10 ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ಸ್ಥಿರ: ಬೆಲೆ ಎಷ್ಟಿದೆ ನೋಡಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದಾಖಲೆ ಮಟ್ಟಕ್ಕೆ ಏರಿಕೆ ಕಂಡಿರುವ ಪೆಟ್ರೋಲ್, ಡೀಸೆಲ್ ದರಗಳಲ್ಲಿ ಮಂಗಳವಾರ ಯಾವುದೇ ಬದಲಾವಣೆಯಾಗಿಲ್ಲ. ಸತತ 10 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಸ್ಥಿರವಾಗಿದೆ.

ಕಳೆದ ಫೆಬ್ರುವರಿ 27ರಂದು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆಯಾಗಿತ್ತು. ಅಂತರರಾಷ್ಟ್ರೀಯ ಕಚ್ಚಾ ತೈಲ ದರ ಏರಿಕೆ ನಡುವೆಯೂ ದೇಶದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ವಾರದಿಂದ ಬೆಲೆ ಏರಿಕೆ ಮಾಡಿಲ್ಲ.

ಫೆಬ್ರವರಿ 27ರಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ  ₹ 91.17 ಏರಿಕೆ ಯಾಗಿತ್ತು.

ದೆಹಲಿ, ಕೋಲ್ಕತ್ತಾ (ರೂ 91.35) ಚೆನ್ನೈ (₹ 93.11) ಮತ್ತು ಮುಂಬೈ ( ₹97.57) ಸೇರಿದಂತೆ ಪ್ರಮುಖ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ದರಗಳಲ್ಲಿ ಯಾವುದೇ ಬದಲಾವಣೆ ಯಾಗಿಲ್ಲ. 

ಡಿಸೇಲ್‌ ಬೆಲೆಯಲ್ಲೂ 10 ದಿನಗಳಿಂದ ಯಾವುದೇ ಬದಲಾವಣೆಯಾಗಿಲ್ಲ. ಮೆಟ್ರೊ ನಗರಗಳ ಪೈಕಿ ಮುಂಬೈನಲ್ಲಿ  ಡೀಸೆಲ್ ದರ ₹ 88.60 ಆಗಿದೆ.

ಇಂದಿನ ದರ...

  ನಗರ ಪೆಟ್ರೋಲ್ ದರ ಡಿಸೇಲ್‌ ದರ
 1 ಬೆಂಗಳೂರು ₹ 94.22 ₹ 86.37
 2 ಚೆನ್ನೈ ₹ 93.13 ₹ 86.46
 3 ದೆಹಲಿ ₹ 91.17 ₹ 81.47
 4 ಮುಂಬೈ  ₹ 97.57 ₹ 88.60

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು