ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಇಟಿಎಫ್‌: ತಗ್ಗಿದ ಬೇಡಿಕೆ

Last Updated 19 ಅಕ್ಟೋಬರ್ 2018, 17:13 IST
ಅಕ್ಷರ ಗಾತ್ರ

ನವದೆಹಲಿ: ಚಿನ್ನದ ವಿನಿಮಯ ವಹಿವಾಟು ನಿಧಿ (ಇಟಿಎಫ್‌) ಬೇಡಿಕೆ ಕಳೆದುಕೊಳ್ಳುತ್ತಿದೆ. ಹೂಡಿಕೆದಾರರು ಸೆಪ್ಟೆಂಬರ್‌ನಲ್ಲಿ ₹ 33 ಕೋಟಿ ಮೌಲ್ಯದ ಇಟಿಎಫ್‌ ಮಾರಾಟ ಮಾಡಿದ್ದಾರೆ.

ಆಗಸ್ಟ್‌ನಲ್ಲಿ ₹ 45 ಕೋಟಿ ಮೌಲ್ಯದ ಇಟಿಎಫ್‌ ಮಾರಾಟ ಮಾಡಿದ್ದರು.2018–19ನೇ ಹಣಕಾಸು ವರ್ಷದ ಮೊದಲ ಐದು ತಿಂಗಳಿನಲ್ಲಿ ಒಟ್ಟಾರೆ ₹ 241 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.

ಇದರಿಂದ ಚಿನ್ನದ ಇಟಿಎಫ್‌ನ ನಿರ್ವಹಣೆಯಲ್ಲಿ ಇರುವ ಸಂಪತ್ತು ಮೌಲ್ಯ ಶೇ 7.5ರಷ್ಟು ಕಡಿಮೆಯಾಗಿ ₹ 4,445 ಕೋಟಿಗೆ ಇಳಿಕೆಯಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.

2012–13ರಲ್ಲಿ ಮಾತ್ರವೇ₹ 1,414 ಕೋಟಿ ಹೂಡಿಕೆಯಾಗಿತ್ತು. ಆ ಬಳಿಕಚಿನ್ನದ ಇಟಿಎಫ್‌ನಲ್ಲಿ ಹೂಡಿಕೆ ಕಡಿಮೆಯಾಗುತ್ತಿದೆ.

ದೇಶದ ಷೇರುಪೇಟೆಗಳಲ್ಲಿ ಹೂಡಿಕೆ ಮಾಡುವುದರಿಂದ ಬರುತ್ತಿರುವ ಗಳಿಕೆಯು ಹೆಚ್ಚಾಗುತ್ತಿದೆ. ಹೀಗಾಗಿ ಹೂಡಿಕೆದಾರರು ಚಿನ್ನದ ಇಟಿಎಫ್‌ನಲ್ಲಿ ಹೂಡಿಕೆಗೆ ಮನಸ್ಸು ಮಾಡುತ್ತಿಲ್ಲ ಎಂದು ಉದ್ಯಮವಲಯದ ತಜ್ಞರು ಹೇಳಿದ್ದಾರೆ.

‘ಭಾರತದ ಹೂಡಿಕೆದಾರರು ಇಟಿಎಫ್‌ಗಿಂತಲೂ ಭೌತಿಕ ರೂಪದಲ್ಲಿ ಚಿನ್ನವನ್ನು ಸಂಗ್ರಹಿಸಿಡಲು ಹೆಚ್ಚು ಆದ್ಯತೆ ನೀಡುತ್ತಾರೆ’ ಎಂದು ಮಾರ್ನಿಂಗ್‌ಸ್ಟಾರ್‌ ಸಂಸ್ಥೆಯ ಸಂಶೋಧನಾ ನಿರ್ದೇಶಕ ಕೌಸುಭ್‌ ಬೇಲ್‌ಪುರ್‌ಕರ್‌ ಹೇಳಿದ್ದಾರೆ.

ಷೇರು ಮತ್ತು ಷೇರು ಸಂಬಂಧಿತ ಉಳಿತಾಯ ಯೋಜನೆಗಳಲ್ಲಿ ₹ 7,700 ಕೋಟಿ ಹೂಡಿಕೆಯಾಗಿದೆ. ಒಟ್ಟಾರೆ, ಮ್ಯೂಚುವಲ್ ಫಂಡ್‌ ಯೋಜನೆಗಳಲ್ಲಿ ₹ 1.75 ಲಕ್ಷ ಕೋಟಿ ಹೂಡಿಕೆಯಾಗಿದೆ ಎಂದು ಒಕ್ಕೂಟವು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT