ನವದೆಹಲಿ: ಬ್ರಿಟನ್ನಿಂದ ಆಮದಾಗುವ ವೈನ್ಗೆ ಭಾರತವು ಸುಂಕ ರಿಯಾಯಿತಿ ನೀಡಿಲ್ಲ. ಬಿಯರ್ ಮೇಲಿನ ಸುಂಕ ಕಡಿತಕ್ಕೂ ಕೋಟಾ ಮಿತಿ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ) ಅಂತಿಮಗೊಂಡಿದ್ದು, ಕೆಲವು ಸರಕುಗಳಿಗೆ ಎರಡು ದೇಶಗಳು ಸುಂಕ ಕಡಿತ ಮಾಡಿವೆ.

ಆದರೆ, ಅಲ್ಲಿಂದ ಪೂರೈಕೆಯಾಗುವ ಹೈನು ಉತ್ಪನ್ನ, ಸೇಬು, ಚೀಸ್, ಓಟ್ಸ್, ಪ್ರಾಣಿ ಮತ್ತು ಸಸ್ಯಜನ್ಯ ತೈಲಕ್ಕೆ ವ್ಯಾಪಾರ ಒಪ್ಪಂದದಲ್ಲಿ ಭಾರತವು ಸುಂಕ ಕಡಿತ ಮಾಡಿಲ್ಲ ಎಂದು ಹೇಳಿದ್ದಾರೆ.

ವೈನ್ ಹಾಗೂ ಹಲವು ಕೃಷಿ ಸರಕುಗಳನ್ನು ಎಫ್ಟಿಎ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಹೇಳಿದ್ದಾರೆ.

ಉಭಯ ರಾಷ್ಟ್ರಗಳು ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಂಡಿರುವ ಬಗ್ಗೆ ಈಗಾಗಲೇ ಘೋಷಿಸಿವೆ. ಒಪ್ಪಂದದ ಅನ್ವಯ ಭಾರತದಲ್ಲಿ ಬ್ರಿಟಿಷ್ ಸ್ಕಾಚ್ ವಿಸ್ಕಿ ಮತ್ತು ಕಾರುಗಳು ಅಗ್ಗವಾಗಲಿವೆ. ಭಾರತದಿಂದ ರಫ್ತಾಗುವ ಜವಳಿ ಮತ್ತು ಚರ್ಮದ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿತಗೊಳಿಸಲಾಗಿದೆ.

ಬ್ರಿಟನ್ ವಿಸ್ಕಿ ಮೇಲಿನ ಸುಂಕವನ್ನು ಶೇ 150ರಿಂದ ಶೇ 75ಕ್ಕೆ ತಗ್ಗಿಸಲಾಗಿದೆ. ಜಿನ್ ಮೇಲಿನ ಸುಂಕವನ್ನು ಶೇ 40ಕ್ಕೆ ಇಳಿಸಲಾಗಿದೆ. ಒಪ್ಪಂದದ ಹತ್ತನೆಯ ವರ್ಷದಲ್ಲಿ ಇಷ್ಟು ಪ್ರಮಾಣದ ಸುಂಕ ಕಡಿತವಾಗಲಿದೆ. ಹಾಗಾಗಿ, ಭಾರತದಲ್ಲಿನ ವಿಸ್ಕಿ ತಯಾರಕರ ಮೇಲೆ ಈ ಕ್ರಮವು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈಗಾಗಲೇ, ಭಾರತವು ಐರೋಪ್ಯ ಒಕ್ಕೂಟದ ಜೊತೆಗೂ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಮಾತುಕತೆ ಆರಂಭಿಸಿದೆ. ವೈನ್ ತಯಾರಿಕೆಯಲ್ಲಿ ಐರೋಪ್ಯ ಒಕ್ಕೂಟ ಮುಂಚೂಣಿಯಲ್ಲಿದೆ. ಬ್ರಿಟನ್ ವೈನ್ಗೆ ಸುಂಕ ವಿನಾಯಿತಿ ನೀಡಿದರೆ, ಐರೋಪ್ಯ ಒಕ್ಕೂಟವು ಸುಂಕ ವಿನಾಯಿತಿಯ ಪ್ರಸ್ತಾವ ಮುಂದಿಡುವ ಸಾಧ್ಯತೆಯಿದೆ. ಹಾಗಾಗಿ, ಭಾರತವು ವೈನ್ಗೆ ಸುಂಕ ವಿನಾಯಿತಿ ನೀಡಿಲ್ಲ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.