ಬುಧವಾರ, ಆಗಸ್ಟ್ 21, 2019
27 °C
ಟಾಟಾ ಕ್ಯಾಪಿಟಲ್‌ ಫೈನಾನ್ಶಿಯಲ್‌ ಸರ್ವಿಸಸ್‌ ಸ್ಪಷ್ಟನೆ

‘ಸಿಡಿಇಎಲ್‌’ ಗ್ರೂಪ್‌ ಸಾಲ ಬಾಕಿ ಇಲ್ಲ

Published:
Updated:

ನವದೆಹಲಿ: ಕಾಫಿ ಉದ್ಯಮಿ ವಿ. ಜಿ. ಸಿದ್ಧಾರ್ಥ ಅವರು ತನ್ನಿಂದ ಪಡೆದಿದ್ದ ಸಾಲವನ್ನು ಪೂರ್ಣವಾಗಿ ಪಾವತಿಸಿದ್ದರು ಎಂದು ಟಾಟಾ ಕ್ಯಾಪಿಟಲ್‌ ಫೈನಾನ್ಶಿಯಲ್‌ ಸರ್ವಿಸಸ್‌ (ಟಿಸಿಎಫ್‌ಎಸ್‌) ತಿಳಿಸಿದೆ.

ಹಣಕಾಸು ಮುಗ್ಗಟ್ಟಿನ ಒತ್ತಡದಿಂದಾಗಿಯೇ ಕಾಫಿ ಉದ್ಯಮಿ ವಿ. ಜಿ. ಸಿದ್ಧಾರ್ಥ ಅವರು ಬದುಕಿಗೆ ವಿದಾಯ ಹೇಳಿದ್ದಾರೆ ಎನ್ನುವ ವರದಿಗಳ ಮಧ್ಯೆಯೇ, ಸ್ಪಷ್ಟನೆ ನೀಡಿರುವ ‘ಟಿಸಿಎಫ್‌ಎಸ್‌’, ಸಿದ್ಧಾರ್ಥ ಅವರಿಂದ ತನಗೆ ಯಾವುದೇ ಸಾಲ ಬಾಕಿ ಇದ್ದಿರಲಿಲ್ಲ ಎಂದು ಮಾಹಿತಿ ನೀಡಿದೆ.

2017–18ರಲ್ಲಿ ಸಂಸ್ಥೆಯು ಕಾಫಿ ಡೇ ಎಂಟರ್‌ಪ್ರೈಸಿಸ್‌ ಲಿಮಿಟೆಡ್‌ಗೆ  ₹ 165 ಕೋಟಿ ಮೊತ್ತದ ಸಾಲ ನೀಡಿತ್ತು. 2019ರ ಮಾರ್ಚ್‌ನಲ್ಲಿ ಈ ಸಾಲವನ್ನು ಪೂರ್ಣ ಪ್ರಮಾಣದಲ್ಲಿ ಮರುಪಾವತಿ ಮಾಡಲಾಗಿದೆ ಎಂದು ‘ಟಿಸಿಎಫ್‌ಎಸ್‌’ ಹೇಳಿಕೆ ನೀಡಿದೆ.

ಟಾಟಾ ಕ್ಯಾಪಿಟಲ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿರುವ ‘ಟಿಸಿಎಫ್‌ಎಸ್‌’, ‘ಸಿಡಿಇಎಲ್‌’ ಅಥವಾ ಅದರ ಇತರ ಯಾವುದೇ ಅಂಗಸಂಸ್ಥೆಗಳಿಗೆ ಸದ್ಯಕ್ಕೆ ಸಾಲ ನೀಡಿಲ್ಲ ಎಂದೂ ತಿಳಿಸಿದೆ.

Post Comments (+)