ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನ್‌ತೇರಸ್‌; ಕಾಣದ ಖರೀದಿ ಉತ್ಸಾಹ

Last Updated 25 ಅಕ್ಟೋಬರ್ 2019, 18:30 IST
ಅಕ್ಷರ ಗಾತ್ರ

ನವದೆಹಲಿ / ಮುಂಬೈ: ಚಿನ್ನಾಭರಣಗಳ ಖರೀದಿಗೆ ಶುಭ ದಿನವಾಗಿರುವ ಧನ್‌ತೇರಸ್‌ ಸಂದರ್ಭದಲ್ಲಿ ದೇಶದಾದ್ಯಂತ ಈ ಬಾರಿ ಗ್ರಾಹಕರಲ್ಲಿ ಹೆಚ್ಚಿನ ಖರೀದಿ ಸಂಭ್ರಮ ಕಂಡು ಬರಲಿಲ್ಲ.

ಗ್ರಾಹಕರಲ್ಲಿ ಕಾಣದ ಉತ್ಸಾಹ ಮತ್ತು ಚಿನ್ನದ ದುಬಾರಿ ದರದ ಕಾರಣಕ್ಕೆ ಚಿನಿವಾರ ಪೇಟೆಯಲ್ಲಿ ಆಭರಣಗಳ ಮಾರಾಟ ಮಂದಗತಿಯಲ್ಲಿತ್ತು. ಬಹುತೇಕ ಗ್ರಾಹಕರು ಸಾಂಕೇತಿಕವಾಗಿ ಬೆಳ್ಳಿ ನಾಣ್ಯ ಮತ್ತು ಬೆಳ್ಳಿಯ ಇತರ ಪರಿಕರಗಳನಷ್ಟೇ ಖರೀದಿಸಲು ಹೆಚ್ಚಿನ ಆಸಕ್ತಿ ತೋರಿಸಿದರು ಎಂದು ಚಿನಿವಾರ ಪೇಟೆಯ ಮೂಲಗಳು ತಿಳಿಸಿವೆ.

ದೇಶದ ಉತ್ತರ ಮತ್ತು ಪಶ್ಚಿಮದ ಭಾಗಗಳಲ್ಲಿ ಶುಕ್ರವಾರ ಆಚರಿಸಿದ ಧನ್‌ತೇರಸ್‌ ಪವಿತ್ರ ದಿನ ಸಂಘಟಿತ ವಲಯದ ಚಿನ್ನಾಭರಣ ಮಾರಾಟ ಸಂಸ್ಥೆಗಳಲ್ಲಿ ಅನೇಕ ಗ್ರಾಹಕರು ಈ ಮೊದಲೇ ಕಾದಿರಿಸಿದ್ದ ಆಭರಣಗಳನ್ನು ಮನೆಗೆ ತೆಗೆದುಕೊಂಡು ಹೋದರು.

ಅಸಂಘಟಿತ ವಲಯದ ವರ್ತಕರು ದೇಶಿ ಚಿನ್ನಾಭರಣ ಮಾರುಕಟ್ಟೆಯಲ್ಲಿ ಶೇ 70ರಷ್ಟು ಪಾಲು ಹೊಂದಿದ್ದಾರೆ. ಮುಂಬರುವ ದಿನಗಳಲ್ಲಿ ಮದುವೆ ದಿನಗಳು ಬರಲಿದ್ದು ಮಾರಾಟ ಚೇತರಿಕೆ ಕಾಣಲಿದೆ ಎನ್ನುವ ನಿರೀಕ್ಷೆ ಪೇಟೆಯಲ್ಲಿ ಇದೆ.

‘ಜುಲೈ ತಿಂಗಳಲ್ಲಿ ದಿಢೀರನೆ ಚಿನ್ನದ ಬೆಲೆ ಏರಿಕೆ ಕಂಡಿರುವುದು ಮತ್ತು ಮಂದಗತಿಯ ಆರ್ಥಿಕ ಬೆಳವಣಿಗೆಯ ಕಾರಣಕ್ಕೆ ಗ್ರಾಹಕರು ಮಾಡುವ ವೆಚ್ಚದಲ್ಲಿ ಕುಸಿತವಾಗಿರುವುದರಿಂದ ಮಾರಾಟದಲ್ಲಿ ಇಳಿಕೆಯಾಗಿದೆ’ ಎಂದು ಟೈಟನ್‌ ಚಿನ್ನಾಭರಣ ವಿಭಾಗದ ಹಿರಿಯ ಉಪಾಧ್ಯಕ್ಷ ಸಂದೀಪ್‌ ಕುಲಹಳ್ಳಿ ಹೇಳಿದ್ದಾರೆ.

ಚಿನ್ನದ ದರ

ವರ್ಷ; ಬೆಲೆ (ಪ್ರತಿ 10 ಗ್ರಾಂಗೆ)

2017; ₹ 30 ಸಾವಿರ

2018; ₹ 32,550

2019; ₹ 38,570

(* ಮುಂಬೈ ಚಿನಿವಾರ ಪೇಟೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT