ಭಾನುವಾರ, ಫೆಬ್ರವರಿ 28, 2021
31 °C

₹ 1,000ಕ್ಕೆ ಮುಟ್ಟಿದ ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 14.2 ಕೆ.ಜಿ ತೂಗುವ ಸಬ್ಸಿಡಿರಹಿತ ಗೃಹೋಪಯೋಗಿ ಅಡುಗೆ ಅನಿಲ ಸಿಲಿಂಡರ್‌ ದರವು ರಾಜ್ಯದ ಅನೇಕ ಕಡೆಗಳಲ್ಲಿ ₹1,000 ಆಸುಪಾಸು ಮುಟ್ಟಿದೆ.

ಬೀದರ್‌ನಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ₹ 1,017 ಇದ್ದರೆ, ಬೆಂಗಳೂರಿನಲ್ಲಿ ₹ 941 ಇದೆ. ಸಿಲಿಂಡರ್‌ ಮೂಲ ದರದ ಜೊತೆ ವಿವಿಧ ತೆರಿಗೆ ಹಾಗೂ ಸುಂಕಗಳನ್ನು ಸೇರಿಸಿ, ಸಿಲಿಂಡರ್‌ ಪೂರೈಸುವ ವಿತರಣಾ ಏಜೆನ್ಸಿಯು ಬಾಟ್ಲಿಂಗ್‌ ಘಟಕದಿಂದ ಇರುವ ದೂರದ ಆಧಾರದ ಮೇಲೆ ದರ ನಿಗದಿ ಮಾಡುತ್ತದೆ.

ಬೀದರ್‌ಗೆ ಬೆಳಗಾವಿ ಬಾಟ್ಲಿಂಗ್‌ ಘಟಕದಿಂದ ಸಿಲಿಂಡರ್‌ ಪೂರೈಕೆ ಮಾಡುತ್ತಿರುವುದರಿಂದ ದರ ದುಬಾರಿಯಾಗಿದೆ.

ರಾಜ್ಯದಲ್ಲಿ ಮೂರು ತೈಲ ಕಂಪನಿಗಳಿಗೆ ಸೇರಿದ 11 ಬಾಟ್ಲಿಂಗ್ ಘಟಕಗಳಿವೆ. ಪೆಟ್ರೋಲ್‌ ಹಾಗೂ ಡೀಸೆಲ್‌ ದರ ದಿನನಿತ್ಯದ ಆಧಾರದಲ್ಲಿ ಪರಿಷ್ಕರಣೆ ಆಗುತ್ತಿದೆ. ಅನಿಲ ಸಿಲಿಂಡರ್‌ ದರವನ್ನು ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡಲಾಗುತ್ತಿದೆ.

ಈ ತಿಂಗಳ 5ರಿಂದ ಈಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆ ಆಗಿರುವುದರಿಂದ ಪೆಟೋಲ್‌ ಬೆಲೆ ಲೀಟರ್‌ ₹ 7.50 ಹಾಗೂ ಡೀಸೆಲ್‌ ಲೀಟರ್‌ಗೆ ₹ 4 ಇಳಿಕೆಯಾಗಿದ್ದರೂ, ಅನಿಲ ಸಿಲಿಂಡರ್‌ ಬೆಲೆಯಲ್ಲಿ ಸಾಕಷ್ಟು ಏರಿಕೆ ಕಂಡು ಬಂದಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು