ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗಟು ಹಣದುಬ್ಬರ ಶೇ 5.85 | 21 ತಿಂಗಳ ಕನಿಷ್ಠ

ತಗ್ಗಿದ ಆಹಾರ ವಸ್ತುಗಳ ದರ: 21 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದ ಡಬ್ಲ್ಯುಪಿಐ
Last Updated 15 ಡಿಸೆಂಬರ್ 2022, 1:56 IST
ಅಕ್ಷರ ಗಾತ್ರ

ನವದೆಹಲಿ: ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರವು ನವೆಂಬರ್‌ನಲ್ಲಿ 21 ತಿಂಗಳ ಕನಿಷ್ಠ ಮಟ್ಟವಾದ ಶೇಕಡ 5.85ಕ್ಕೆ ಇಳಿಕೆ ಕಂಡಿದೆ. ಆಹಾರ, ಇಂಧನ ಮತ್ತು ತಯಾರಿಕಾ ವಸ್ತುಗಳ ದರ ಇಳಿಕೆ ಆಗಿರುವುದೇ ಇದಕ್ಕೆ ಕಾರಣ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬುಧವಾರ ತಿಳಿಸಿದೆ.

ಸಗಟು ಹಣದುಬ್ಬರವು ಮೇ ತಿಂಗಳಿನಿಂದಲೂ ಇಳಿಕೆಯ ಹಾದಿಯಲ್ಲಿ ಇದೆ. ಅಕ್ಟೋಬರ್‌ನಲ್ಲಿ ಒಂದಂಕಿ ಮಟ್ಟವಾದ ಶೇ 8.39ಕ್ಕೆ ಇಳಿಕೆ ಕಂಡಿದೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಸಗಟು ಹಣದುಬ್ಬರವು ಶೇ 14.87ರಷ್ಟು ಇತ್ತು. ಆಹಾರ ವಸ್ತುಗಳ ದರ ತುಸು ಇಳಿಕೆ ಆಗಿರುವುದರಿಂದ 2022ರ ನವೆಂಬರ್‌ನಲ್ಲಿ ಸಗಟು ದರ ಸೂಚ್ಯಂಕವು 21 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ. ಈ ಹಿಂದೆ 2021ರ ಫೆಬ್ರುವರಿಯಲ್ಲಿ ಸಗಟು ಹಣದುಬ್ಬರವು ಶೇ 4.83ರಷ್ಟು ಇತ್ತು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಜನಸಾಮಾನ್ಯರಿಗಾಗಿ ಕೆಲಸ ಮಾಡಲಿದ್ದು, ಹಣದುಬ್ಬರವನ್ನು ಇನ್ನಷ್ಟು ತಗ್ಗಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಯಲ್ಲಿ ಹೇಳಿದ್ದಾರೆ.

ಆಹಾರ ವಸ್ತುಗಳ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ 8.33ರಷ್ಟು ಇದ್ದಿದ್ದು ನವೆಂಬರ್‌ನಲ್ಲಿ ಶೇ 1.07ಕ್ಕೆ ಇಳಿಕೆ ಕಂಡಿದೆ. ತರಕಾರಿಗಳ ಹಣದುಬ್ಬರವು ಶೇ 17.61ರಷ್ಟು ಇದ್ದಿದ್ದು ಶೇ (–) 20.08ಕ್ಕೆ ತಲುಪಿದೆ. ಇಂಧನ ಮತ್ತು ವಿದ್ಯುತ್‌ ವಲಯದ ಹಣದುಬ್ಬರವು ಶೇ 17.35ರಷ್ಟು ಮತ್ತು ತಯಾರಿಕಾ ವಲಯದ ಹಣದುಬ್ಬರವು ಶೇ 3.59ರಷ್ಟು ಆಗಿದೆ.

ಗ್ರಾಹಕ ದರ ಸೂಚ್ಯಂಕ ಆಧರಿಸಿದ ಚಿಲ್ಲರೆ ಹಣದುಬ್ಬರವು ನವೆಂಬರ್‌ನಲ್ಲಿ ಶೇ 5.88ಕ್ಕೆ ಇಳಿಕೆ ಕಂಡಿದೆ. ಹೀಗಿದ್ದರೂ ಫೆಬ್ರುವರಿಯಲ್ಲಿ ನಡೆಯಲಿರುವ ಹಣಕಾಸು ನೀತಿ ಪರಾಮರ್ಶೆಯಲ್ಲಿ ಆರ್‌ಬಿಐ ರೆಪೊ ದರವನ್ನು ಶೇ 0.25ರಷ್ಟು ಹೆಚ್ಚಿಸಲಿದೆ ಎಂದು ತಜ್ಞರು ನಿರೀಕ್ಷೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT