ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟೆಂಟ್ ಅರ್ಜಿ ಸಲ್ಲಿಕೆ ಹೆಚ್ಚಳ

Last Updated 12 ಏಪ್ರಿಲ್ 2022, 11:30 IST
ಅಕ್ಷರ ಗಾತ್ರ

ನವದೆಹಲಿ: ಬೌದ್ಧಿಕ ಆಸ್ತಿ ಹಕ್ಕುಗಳನ್ನು ಬಲಪಡಿಸಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಕಾರಣದಿಂದಾಗಿ 2021–22ರಲ್ಲಿ ಒಟ್ಟು 66,440 ಪೇಟೆಂಟ್ ಅರ್ಜಿಗಳು ದೇಶದಲ್ಲಿ ಸಲ್ಲಿಕೆಯಾಗಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಂಗಳವಾರ ತಿಳಿಸಿದೆ.

ಈ ಸಂಖ್ಯೆಯು 2014–15ರಲ್ಲಿ 42,763 ಆಗಿತ್ತು. 2021–22ರಲ್ಲಿ ದೇಶದಲ್ಲಿ 30,074 ಪೇಟೆಂಟ್‌ಗಳನ್ನು ನೀಡಲಾಗಿದೆ. 2014–15ರಲ್ಲಿ 5,978 ಪೇಟೆಂಟ್‌ಗಳನ್ನು ಮಾತ್ರ ನೀಡಲಾಗಿತ್ತು ಎಂದೂ ಸಚಿವಾಲಯ ಹೇಳಿದೆ.

ಪೇಟೆಂಟ್ ಅರ್ಜಿಯ ಪರಿಶೀಲನೆಗೆ 2016ರಲ್ಲಿ ಒಟ್ಟು 72 ತಿಂಗಳು ತೆಗೆದುಕೊಳ್ಳಲಾಗುತ್ತಿತ್ತು. ಈ ಅವಧಿ ಈಗ ಕಡಿಮೆ ಆಗಿದ್ದು, ಐದರಿಂದ 23 ತಿಂಗಳಿಗೆ ಇಳಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT