ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಮಾರಾಟ ಕಂಪನಿಗಳಿಗೆ ದಾಖಲೆ ಲಾಭ ನಿರೀಕ್ಷೆ

Published 26 ಜುಲೈ 2023, 12:50 IST
Last Updated 26 ಜುಲೈ 2023, 12:50 IST
ಅಕ್ಷರ ಗಾತ್ರ

ಮುಂಬೈ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ತೆರಿಗೆ ಪೂರ್ವದ ಲಾಭವು ಈ ವರ್ಷದಲ್ಲಿ ದಾಖಲೆಯ ₹1 ಲಕ್ಷ ಕೋಟಿಯನ್ನು ತಲುಪುವ ನಿರೀಕ್ಷೆ ಇದೆ. ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿನ ಮಟ್ಟದಲ್ಲಿ ಇರುವುದು ಹಾಗೂ ಆಮದು ಕಚ್ಚಾ ತೈಲದ ಬೆಲೆಯು ಸ್ಥಿರವಾಗಿ, ಕಡಿಮೆ ಮಟ್ಟದಲ್ಲಿ ಇರುವುದು ಈ ಲಾಭಕ್ಕೆ ಕಾರಣ ಎಂದು ರೇಟಿಂಗ್ಸ್ ಸಂಸ್ಥೆ ಕ್ರಿಸಿಲ್ ಸಿದ್ಧಪಡಿಸಿರುವ ವರದಿ ಹೇಳಿದೆ.

ಕಚ್ಚಾ ತೈಲದ ಬೆಲೆಯು ಈ ಹಣಕಾಸು ವರ್ಷದಲ್ಲಿ ಶೇಕಡ 30ರಷ್ಟಕ್ಕಿಂತ ಕಡಿಮೆ ಆಗಿದೆ. ಹೀಗಿದ್ದರೂ 2022ರ ಮೇ ತಿಂಗಳ ನಂತರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ತೈಲ ಮಾರಾಟ ಕಂಪನಿಗಳು ಪರಿಷ್ಕರಿಸಿಲ್ಲ.

2017ರಿಂದ 2022ರ ನಡುವಿನ ಅವಧಿಯಲ್ಲಿ ತೈಲ ಮಾರಾಟ ಕಂಪನಿಗಳ ಕಾರ್ಯಾಚರಣೆ ಲಾಭವು ಸರಾಸರಿ ₹60 ಸಾವಿರ ಕೋಟಿ ಇದೆ. ಇದು ಈ ವರ್ಷದಲ್ಲಿ ₹1 ಲಕ್ಷಕ್ಕೆ ತಲುಪಬಹುದು ಎಂದು ಕ್ರಿಸಿಲ್ ಅಂದಾಜು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT