ಬೆಂಗಳೂರು: ನಾಗರಹೊಳೆ ಹುಲಿ ಅಭಯಾರಣ್ಯದ 4 ರಿಂದ 5 ವರ್ಷ ವಯಸ್ಸಿನ ಗಂಡು ಹುಲಿಯೊಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ವಿಭಾಗದ ಅರಣ್ಯ ಪ್ರದೇಶವನ್ನು ತಲುಪಲು ಬರೋಬ್ಬರಿ 360 ಕಿಮೀ ಗಿಂತ ಹೆಚ್ಚಿನ ದೂರ ಕ್ರಮಿಸಿದೆ. ಬರೋಬ್ಬರಿ 20 ತಿಂಗಳ ಈ ಪ್ರಯಾಣವು ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ದಾಖಲಾದ ವಯಸ್ಕ ಹುಲಿಯೊಂದರ ಅತೀ ದೂರದ ಪ್ರಯಾಣಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದ ದಕ್ಷಿಣ ಭಾಗದಿಂದ ವಾಯುವ್ಯದ ತುದಿಗೆ ಸಾಗಿಬಂದ ಈ ಪ್ರಯಾಣವು ಹುಲಿಗಳ ಸಂರಕ್ಷಣೆಯ ಮಹತ್ವ ಹಾಗೂ ಹುಲಿ ಕಾರಿಡಾರ್ಗಳ ಮಹತ್ವವನ್ನು ಎತ್ತಿ ತೋರಿಸಿದೆ. ಜೊತೆಗೆ ಅವುಗಳ ಸಮತೋಲನ ಮತ್ತು ಆನುವಂಶಿಕ ವೈವಿಧ್ಯೀಕರಣವನ್ನು ಸಂರಕ್ಷಣೆಯ ಮಹತ್ವವನ್ನು ಎತ್ತಿ ತೋರಿಸಿದೆ.

ಕೆಲವೆಡೆ ಹುಲಿ ಕಾರಿಡಾರ್ಗಳು ಹೆಚ್ಚು ನಾಶಗೊಂಡಿದ್ದರೂ, ಮನುಷ್ಯರ ಸಂಪರ್ಕಕ್ಕೆ ಬಾರದೆ ಅಲೆದಾಡಿದೆ. ಮುಂದಿನ ದಿನಗಳಲ್ಲಿ ಈ ಹುಲಿ ಕಾಳಿ ಹುಲಿ ಅಭಯಾರಣ್ಯದ ಕಡೆಗೆ ಅಥವಾ ಭೀಮಗಡ್ ವನ್ಯಜೀವಿ ಅಭಯಾರಣ್ಯದ ಮೂಲಕ ಉತ್ತರಕ್ಕೆ ಗೋವಾ ಅಥವಾ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ಕರಿಂದ ಐದು ವರ್ಷ ವಯಸ್ಸಿನ ಈ ಹುಲಿಯ ಫೊಟೋವನ್ನು 2023ರಲ್ಲಿ ನಾಗರಹೊಳೆಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತೆಗೆಯಲಾಗಿತ್ತು. ಇತ್ತೀಚೆಗೆ ಕಾರವಾರ ವಿಭಾಗದಲ್ಲೂ ಅದರ ಛಾಯಾಚಿತ್ರ ತೆಗೆಯಲಾಗಿದೆ. ರಾಜ್ಯದ ಹುಲಿ ದತ್ತಾಂಶ ಸಂಗ್ರಹದ ಮೂಲಕ ಕಾರವಾರ ವಿಭಾಗದ ಅಧಿಕಾರಿಗಳು ಹುಲಿಯ ಗುರುತನ್ನು ಖಚಿತಪಡಿಸಿದ್ದಾರೆ.

‘ಕಾರವಾರ ವಿಭಾಗವನ್ನು ತಲುಪಲು ಹುಲಿ ತೆಗೆದುಕೊಂಡಿರುವ ಮಾರ್ಗದ ಕುರಿತು ನಮಗೆ ಖಚಿತ ಮಾಹಿತಿ ಇಲ್ಲ. ಆದರೆ, ಹುಲಿ ಸುತ್ತಾಡಿರುವ ಮಾರ್ಗ ಗಮನಿಸಿದರೆ ನಾಗರಹೊಳೆ ಮತ್ತು ಉತ್ತರ ಕನ್ನಡ ನಡುವೆ ಹುಲಿಗಳಿಗೆ ಸುರಕ್ಷಿತ ಕಾರಿಡಾರ್ ಇದೆ ಎಂಬುದು ಸಾಬೀತಾಗುತ್ತದೆ. ಹುಲಿ ತನ್ನ ಪ್ರಯಾಣವನ್ನು ಮುಂದುವರೆಸಿದರೆ, ಮನುಷ್ಯರ ಸಂಪರ್ಕಕ್ಕೆ ಬಾರದೆ ಕೆಟಿಆರ್ ಅಥವಾ ಇತರ ಸಂರಕ್ಷಿತ ಪ್ರದೇಶಗಳನ್ನು ತಲುಪು ಸಾಧ್ಯತೆ ಇದೆ’ ಎಂದು ಕಾರವಾರ ಅರಣ್ಯ ಉಪ ಸಂರಕ್ಷಣಾಧಿಕಾರಿ ಸಿ. ರವಿಶಂಕರ್ ತಿಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಗಂಡು ಹುಲಿಗಳ ಸಂಚಾರ ಸಾಮಾನ್ಯ ಪ್ರಕ್ರಿಯೆಯಾಗಿದೆ. ತಾಯಿಯಿಂದ ಬೇರೆಯಾದ ಗಂಡು ಹುಲಿಗಳು ತನ್ನ ಸುರಕ್ಷಿತ ನೆಲೆಯನ್ನು ಸ್ಥಾಪಿಸಿಕೊಳ್ಳಲು ಸ್ಥಳಾಂತರಗೊಳ್ಳುತ್ತವೆ ಎಂದು ಭಾರತೀಯ ವನ್ಯಜೀವಿ ಸಂಸ್ಥೆ-ಎನ್ಟಿಸಿಎ ಹುಲಿ ಕೋಶದ ಮಾಜಿ ನೋಡಲ್ ಅಧಿಕಾರಿ ಕಮರ್ ಖುರೇಷಿ ತಿಳಿಸಿದ್ದಾರೆ.
.‘ಎಂ.ಎಂ ಹಿಲ್ಸ್: ಹುಲಿ ಯೋಜನೆ ವ್ಯಾಪ್ತಿಗೆ ಬೇಡ’.ಮನುಷ್ಯರ ಮೇಲೆ ಹುಲಿ ದಾಳಿಗಳು ಮರುಕಳಿಸದಿರಲು ಅಧಿಕಾರಿಗಳಿಗೆ ಖಂಡ್ರೆ ತಾಕೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.