ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲಾದಿಂದ ವಿದ್ಯುತ್ ಚಾಲಿತ ಸ್ಕೂಟರ್: ₹ 2,400 ಕೋಟಿ ಹೂಡಿಕೆ

Last Updated 14 ಡಿಸೆಂಬರ್ 2020, 10:43 IST
ಅಕ್ಷರ ಗಾತ್ರ

ನವದೆಹಲಿ: ವಿದ್ಯುತ್ ಚಾಲಿತ ಸ್ಕೂಟರ್ ತಯಾರಿಕಾ ಘಟಕವನ್ನು ಆರಂಭಿಸಲು ತಮಿಳುನಾಡು ಸರ್ಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಓಲಾ ಕಂಪನಿ ತಿಳಿಸಿದೆ. ಈ ಒಪ್ಪಂದದ ಅಡಿ ಓಲಾ ಒಟ್ಟು ₹ 2,400 ಕೋಟಿ ಹೂಡಿಕೆ ಮಾಡಲಿದೆ.

ಓಲಾ ಕಂಪನಿ ಆರಂಭಿಸುತ್ತಿರುವ, ವಿದ್ಯುತ್ ಚಾಲಿತ ಸ್ಕೂಟರ್ ತಯಾರಿಸುವ ಮೊದಲ ಘಟಕ ಇದಾಗಲಿದೆ. ಬೆಂಗಳೂರಿಗೆ ಸಮೀಪದಲ್ಲೇ ಇರುವ ಹೊಸೂರಿನಲ್ಲಿ ಇರಲಿರುವ ಈ ಘಟಕವು ಒಟ್ಟು 10 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಲಿದೆ. ಸ್ಕೂಟರ್ ತಯಾರಿಕೆಯಲ್ಲಿ ವಿಶ್ವದ ಅತಿದೊಡ್ಡ ಘಟಕ ಕೂಡ ಇದಾಗಲಿದೆ. ಆರಂಭದಲ್ಲಿ ಇದು ಪ್ರತಿ ವರ್ಷ 20 ಲಕ್ಷ ಸ್ಕೂಟರ್‌ಗಳನ್ನು ತಯಾರಿಸಲಿದೆ ಎಂದು ಕಂಪನಿ ತಿಳಿಸಿದೆ.

‘ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಅನುಗುಣವಾಗಿ ಓಲಾ ಕಾರ್ಖಾನೆಯು ಆತ್ಮನಿರ್ಭರ ಭಾರತ ನಿರ್ಮಾಣ ಮಾಡುವ ವಿಚಾರದಲ್ಲಿ ಪ್ರಮುಖ ಹೆಜ್ಜೆಯಾಗಲಿದೆ. ಭಾರತವು ವಿದ್ಯುತ್ ಚಾಲಿತ ವಾಹನಗಳ ಆಮದನ್ನು ನೆಚ್ಚಿಕೊಳ್ಳುವುದು ತಗ್ಗಲಿದೆ. ಸ್ಥಳೀಯವಾಗಿ ತಯಾರಿಸುವ ಪ್ರಕ್ರಿಯೆಗೆ ಶಕ್ತಿ ನೀಡುತ್ತದೆ. ದೇಶದಲ್ಲಿ ತಾಂತ್ರಿಕ ಪರಿಣತಿ ಹೆಚ್ಚಲು ಕೂಡ ಇದು ನೆರವಾಗುತ್ತದೆ’ ಎಂದು ಕೂಡ ಕಂಪನಿ ಹೇಳಿಕೊಂಡಿದೆ.

ಓಲಾದ ಈ ಕಾರ್ಖಾನೆಯು ಭಾರತದ ಮಾರುಕಟ್ಟೆಗೆ ವಿದ್ಯುತ್ ಚಾಲಿತ ಸ್ಕೂಟರ್‌ಗಳನ್ನು ಪೂರೈಕೆ ಮಾಡುವುದಷ್ಟೇ ಅಲ್ಲದೆ, ಯುರೋಪ್, ಏಷ್ಯಾದ ಇತರ ರಾಷ್ಟ್ರಗಳು, ಲ್ಯಾಟಿನ್‌ ಅಮೆರಿಕಾದ ಮಾರುಕಟ್ಟೆಗೆ ಕೂಡ ಸ್ಕೂಟರ್‌ಗಳನ್ನು ರಫ್ತು ಮಾಡಲಿದೆ. ಈ ಕಾರ್ಖಾನೆಯು ಇನ್ನೊಂದು ವರ್ಷದಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT