ಬುಧವಾರ, ಏಪ್ರಿಲ್ 14, 2021
24 °C

ಭಾರತದಿಂದ ಹತ್ತಿ ಆಮದಿಗೆ ಪಾಕ್‌ ಅನುಮತಿ ನೀಡುವ ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ವ್ಯಾಪಾರವು ಮತ್ತೆ ಆರಂಭವಾಗುವ ನಿರೀಕ್ಷೆ ವ್ಯಕ್ತವಾಗುತ್ತಿದೆ. ಪಾಕಿಸ್ತಾನವು ಭೂಮಾರ್ಗದ ಮೂಲಕ ಭಾರತದಿಂದ ಹತ್ತಿಯನ್ನು ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.

ವಾಣಿಜ್ಯ ವಿಷಯದಲ್ಲಿ ಪ್ರಧಾನಿಯ ಸಲಹೆಗಾರ ಸಚಿವ ಅಬ್ದುಲ್‌ ರಜಾಕ್‌ ದಾವೂದ್‌ ಅವರು ಹತ್ತಿ ಮತ್ತು ನೂಲನ್ನು ಭಾರತದಿಂದ ಮುಂದಿನ ವಾರದಿಂದ ಆಮದು ಮಾಡಿಕೊಳ್ಳಬೇಕೇ ಬೇಡವೇ ಎನ್ನುವ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದು ‘ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ವರದಿ ಮಾಡಿದೆ.

ದೇಶದಲ್ಲಿ ಹತ್ತಿಯ ಕೊರತೆ ಉಂಟಾಗಿರುವುದನ್ನು ಪ್ರಧಾನಿ ಇಮ್ರಾನ್‌ ಖಾನ್‌ ಅವರ ಗಮನಕ್ಕೆ ಈಗಾಗಲೇ ತರಲಾಗಿದೆ. ಆಮದು ಮಾಡಿಕೊಳ್ಳುವ ಕುರಿತು ನಿರ್ಧಾರ ತೆಗೆದುಕೊಂಡ ಬಳಿಕ ಔಪಚಾರಿಕ ಆದೇಶವನ್ನು ಸಂಸತ್‌ನ ಆರ್ಥಿಕ ಸಮನ್ವಯ ಸಮಿತಿಯ ಮುಂದೆ ಇರಿಸಲಾಗುವುದು ಎಂದು ಮೂಲಗಳು ಹೇಳಿವೆ.

ಮೂಲಗಳ ಪ್ರಕಾರ, ಆಮದು ಮಾಡಿಕೊಳ್ಳುವ ಕುರಿತು ಆಂತರಿಕ ಚರ್ಚೆಗಳು ಈಗಾಗಲೇ ಪ್ರಾರಂಭವಾಗಿವೆ. ಆದರೆ ಪ್ರಧಾನಿಯ ಒಪ್ಪಿಗೆ ದೊರೆತ ನಂತರವಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಭಾರತದಿಂದ ಆಮದು ತೀರಾ ಅಗ್ಗವಾಗಲಿದ್ದು, ಮೂರರಿಂದ ನಾಲ್ಕು ದಿನಗಳಲ್ಲಿ ಪಾಕಿಸ್ತಾನ ತಲುಪಲಿದೆ.

ಆದರೆ, ಭಾರತದಿಂದ ಆಮದು ಮಾಡಿಕೊಳ್ಳದಂತೆ ಆಲ್‌ ಪಾಕಿಸ್ತಾನ್‌ ಟೆಕ್ಸ್‌ಟೈಲ್ ಮಿಲ್ಸ್‌ ಅಸೋಸಿಯೇಷನ್‌ (ಎಪಿಟಿಎಂಎ) ಅಲ್ಲಿನ ಸರ್ಕಾರಕ್ಕೆ ಒತ್ತಡ ತರುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು