ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನ್‌ನಲ್ಲಿ ದೋಷ: ವಿಮಾನದಲ್ಲಿಸಿಲುಕಿಕೊಂಡ ಪ್ರಯಾಣಿಕರು

Published 24 ಫೆಬ್ರುವರಿ 2024, 16:02 IST
Last Updated 24 ಫೆಬ್ರುವರಿ 2024, 16:02 IST
ಅಕ್ಷರ ಗಾತ್ರ

ಮುಂಬೈ: ಏರ್‌ ಮಾರಿಷಸ್‌ ವಿಮಾನದಲ್ಲಿ ಉಂಟಾದ ಎಂಜಿನ್‌ ದೋಷದಿಂದಾಗಿ 200 ಪ್ರಯಾಣಿಕರು 5 ಗಂಟೆ ವಿಮಾನದಲ್ಲಿಯೇ ಸಿಲುಕಿಕೊಂಡ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಶನಿವಾರ ನಡೆದಿದೆ.

200 ಪ್ರಯಾಣಿಕರಿದ್ದ ಏರ್ ಮಾರಿಷಸ್ ವಿಮಾನ ಎಂಕೆ 749 ಮುಂಬೈನಿಂದ ಮಾರಿಷಸ್‌ಗೆ ಮುಂಜಾನೆ 4.30ಕ್ಕೆ ಹೊರಡಬೇಕಿತ್ತು. ಆದರೆ ಎಂಜಿನ್‌ನಲ್ಲಿ ಉಂಟಾದ ದೋಷದಿಂದಾಗಿ ಪ್ರಯಾಣಿಕರು ವಿಮಾನದಲ್ಲಿಯೇ ಉಳಿಯುವಂತಾಯಿತು. 

ಈ ವೇಳೆ ವಿಮಾನದ ಹವಾನಿಯಂತ್ರಣ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ 78 ವರ್ಷದ ವ್ಯಕ್ತಿಯೊಬ್ಬರು ಉಸಿರಾಟದ ಸಮಸ್ಯೆಯನ್ನು ಅನುಭವಿಸುವಂತಾಯಿತು. ಪ್ರಯಾಣಿಕರು ಹೊರಗೆ ಹೋಗಲು ಸಿಬ್ಬಂದಿ ಅನುಮತಿಸಲಿಲ್ಲ. ವಿಮಾನದ ಎಂಜಿನ್‌ ದೋಷ ಸರಿಪಡಿಸಲಾಗದ ಕಾರಣ, ವಿಮಾನಯಾನ ಸಂಸ್ಥೆ ಬೆಳಿಗ್ಗೆ 10 ಗಂಟೆಗೆ ವಿಮಾನ ಯಾನವನ್ನು ರದ್ದುಗೊಳಿಸಿತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT