ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಐದು ನಗರಗಳು ಹೂಡಿಕೆಯಲ್ಲಿ ಮುಂದೆ!

Last Updated 2 ಆಗಸ್ಟ್ 2021, 16:15 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಜನ ಮ್ಯೂಚುವಲ್‌ ಫಂಡ್‌ಗಳು, ಷೇರುಗಳು, ವಿನಿಮಯ ವಹಿವಾಟು ನಿಧಿಗಳು (ಇಟಿಎಫ್‌), ರಾಷ್ಟ್ರೀಯ ಪಿಂಚಣಿ ಯೋಜನೆಯಂತಹ (ಎನ್‌ಪಿಎಸ್‌) ಹಣಕಾಸು ಉತ್ಪನ್ನಗಳಲ್ಲಿ ಮಾಡಿರುವ ಹೂಡಿಕೆಯ ಸರಾಸರಿ ಮೊತ್ತ ₹ 1.15 ಲಕ್ಷ ಎಂದು ಪೇಟಿಎಂ ಮನಿ ಹೇಳಿದೆ.

‍ಪಾವತಿ ಸೇವಾ ಕಂಪನಿ ಪೇಟಿಎಂನ ಅಂಗಸಂಸ್ಥೆ ಆಗಿರುವ ಪೇಟಿಎಂ ಮನಿ, ವಿವಿಧ ಹಣಕಾಸು ಉತ್ಪನ್ನಗಳಲ್ಲಿ ಹೂಡಿಕೆ ಮಾಡುವ ಸೇವೆಗಳನ್ನು ಒದಗಿಸುತ್ತಿದೆ. ಕರ್ನಾಟಕದಲ್ಲಿ, ಬೆಂಗಳೂರು, ಬೆಳಗಾವಿ, ಮೈಸೂರು, ಉಡುಪಿ ಮತ್ತು ಧಾರವಾಡ ನಗರಗಳ ಜನ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂದು ಪೇಟಿಎಂ ಮನಿ ತಿಳಿಸಿದೆ. 2020ರಲ್ಲಿ ತನ್ನ ಮೂಲಕ ಆಗಿರುವ ಹೂಡಿಕೆಗಳನ್ನು ಆಧರಿಸಿ ಕಂಪನಿ ಈ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಮಹಿಳೆಯರು ಮಾಡಿರುವ ಹೂಡಿಕೆಯ ಮೊತ್ತವು ಪುರುಷರು ಮಾಡಿರುವ ಹೂಡಿಕೆ ಮೊತ್ತಕ್ಕಿಂತ ಜಾಸ್ತಿ ಇದೆ. ಮಹಿಳೆಯರು ಪುರುಷರಿಗಿಂತ ಶೇಕಡ 46ರಷ್ಟು ಹೆಚ್ಚಿನ ಮೊತ್ತವನ್ನು ವಿವಿಧ ಹಣಕಾಸು ಉತ್ಪನ್ನಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಕರ್ನಾಟಕದ ಹೂಡಿಕೆದಾರರು ಹೆಚ್ಚು ಪ್ರಬುದ್ಧರು ಎಂದು ಕಂಪನಿ ಹೇಳಿದೆ. ಕಂಪನಿಯ ಕರ್ನಾಟಕದ ಬಳಕೆದಾರರ ಪೈಕಿ ಶೇ 50ಕ್ಕಿಂತ ಹೆಚ್ಚಿನವರು 30 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು. ಕರ್ನಾಟಕದ ಹೂಡಿಕೆದಾರರು ಷೇರುಗಳಲ್ಲಿ ಮಾಡಿರುವ ಸರಾಸರಿ ಹೂಡಿಕೆ ಮೊತ್ತ ₹ 83 ಸಾವಿರ. ಕರ್ನಾಟಕದ ಬಳಕೆದಾರರ ಪೈಕಿ ಶೇ 32ರಷ್ಟು ಮಂದಿ ಆರಂಭಿಕ ಸಾರ್ವಜನಿಕ ಹೂಡಿಕೆಗಳಲ್ಲಿ (ಐಪಿಒ) ಹಣ ತೊಡಗಿಸುತ್ತಿದ್ದಾರೆ ಎಂದು ಕಂಪನಿ ಮಾಹಿತಿ ನೀಡಿದೆ.

ಇಂಡಿಯನ್ ರೈಲ್ವೇಸ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್, ಎಂಟಿಎಆರ್‌ ಟೆಕ್ನಾಲಜೀಸ್ ಲಿಮಿಟೆಡ್ ಮತ್ತು ರೇಲ್‌ಟೆಲ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ನ ಐಪಿಒಗಳಿಗೆ ಕರ್ನಾಟಕದ ಬಳಕೆದಾರರಿಂದ ಅತಿಹೆಚ್ಚಿನ ಅರ್ಜಿಗಳು ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT