ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟಿಎಂ ಷೇರಿನ ಮೌಲ್ಯ ಏರಿಕೆ

Published 26 ಫೆಬ್ರುವರಿ 2024, 15:55 IST
Last Updated 26 ಫೆಬ್ರುವರಿ 2024, 15:55 IST
ಅಕ್ಷರ ಗಾತ್ರ

ನವದೆಹಲಿ: ಪೇಟಿಎಂನ ಮಾತೃಸಂಸ್ಥೆಯಾದ ಒನ್‌97 ಕಮ್ಯುನಿಕೇಷನ್‌ನ ಷೇರಿನ ಮೌಲ್ಯ ಸೋಮವಾರ ಶೇ 5ರಷ್ಟು ಏರಿಕೆ ಆಗಿದೆ.

ಸೆನ್ಸೆಕ್ಸ್‌ ಮತ್ತು ನಿಫ್ಟಿಯಲ್ಲಿ ಕ್ರಮವಾಗಿ ಷೇರಿನ ಬೆಲೆ ₹428.10 ಮತ್ತು ₹427.95ಕ್ಕೆ ತಲುಪಿದೆ.

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಬಂಧ ಹೇರಿದೆ. ಹಾಗಾಗಿ, ಯುಪಿಐ ಬಳಸಿಕೊಂಡು ಬೇರೆ ಬ್ಯಾಂಕ್‌ಗಳಿಗೆ ಪೇಟಿಎಂ ಬ್ಯಾಂಕ್‌ನ ಬಳಕೆದಾರರು ವರ್ಗಾವಣೆ ಆಗುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಎನ್‌ಪಿಸಿಐಗೆ ಆರ್‌ಬಿಐ ಸೂಚಿಸಿದ್ದರಿಂದ ಷೇರಿನ ಮೌಲ್ಯ ಏರಿಕೆ ಆಗಿದೆ.

ಷೇರು ಸೂಚ್ಯಂಕಗಳು ಇಳಿಕೆ:

ಷೇರುಪೇಟೆಯಲ್ಲಿ ಹೂಡಿಕೆದಾರರು ಲಾಭ ಮಾಡಿಕೊಳ್ಳುವುದರತ್ತ ಗಮನ ಹರಿಸಿದರು. ಹಾಗಾಗಿ, ಐ.ಟಿ, ಲೋಹದ ಷೇರುಗಳನ್ನು ಮಾರಾಟ ಮಾಡಿದ್ದರಿಂದ ಷೇರು ಸೂಚ್ಯಂಕಗಳು ಇಳಿಕೆಯಾಗಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಸೆನ್ಸೆಕ್ಸ್‌) ಬಿಎಸ್‌ಇ 352 ಅಂಶ ಕುಸಿತವಾಗಿ 72,790ರಲ್ಲಿ ಸ್ಥಿರಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 90 ಅಂಶ ಇಳಿಕೆ ಕಂಡು 22,122ಕ್ಕೆ ವಹಿವಾಟು ಕೊನೆಗೊಂಡಿತು. 

ಬ್ರೆಂಟ್‌ ಕಚ್ಚಾ ತೈಲ ಬೆಲೆ ಶೇ 0.5ರಷ್ಟು ಕಡಿಮೆಯಾಗಿ 76.11 ಡಾಲರ್‌ನಂತೆ ವಹಿವಾಟು ನಡೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT