ಮಂಗಳವಾರ, ಜುಲೈ 14, 2020
28 °C

ಎಚ್‌ಡಿಎಫ್‌ಸಿಯ 1.75 ಕೋಟಿ ಷೇರು ಖರೀದಿಸಿದ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

HDFC

ಮುಂಬೈ: ಚೀನಾದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಹೌಸಿಂಗ್ ಡೆವಲಪ್‌ಮೆಂಟ್ ಫಿನಾನ್ಸ್ ಕಾರ್ಪರೇಷನ್‌ನ (ಎಚ್‌ಡಿಎಫ್‌ಸಿ) 1.01 ರಷ್ಟು ಷೇರುಗಳ ಮೇಲೆ ಮಾಲೀಕತ್ವ ಹೊಂದಿದೆ. ಅಂದರೆ ಚೀನಾದ ಈ ಬ್ಯಾಂಕ್ ಎಚ್‌ಡಿಎಫ್‌ಸಿಯ ಸುಮಾರು 1.75 ಕೋಟಿ ಷೇರುಗಳನ್ನು ಖರೀದಿ ಮಾಡಿದೆ.

 ಮಾರ್ಚ್ ತಿಂಗಳಲ್ಲಿ ಮುಗಿದ ತ್ರೈಮಾಸಿಕ ಅವಧಿಯಲ್ಲಿ ಚೀನಾ ಈ ಷೇರು ಖರೀದಿ ಮಾಡಿದೆ. ಎಚ್‌ಡಿಎಫ್‌ಸಿಯ ಷೇರು ಬೆಲೆ ಕುಸಿತ ಕಂಡ ಸಮಯದಲ್ಲೇ ಈ ಚಟುವಟಿಕೆ ನಡೆದಿದೆ. ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಕಳೆದ ಒಂದು ತಿಂಗಳಲ್ಲಿ ಎಚ್‌ಡಿಎಫ್‌ಸಿಯ ಷೇರುಗಳ ಬೆಲೆ ಶೇ. 25ಕ್ಕಿಂತಲೂ ಕಡಿಮೆಯಾಗಿದೆ. 

ವಿದೇಶಿ ಬಂಡವಾಳ ಹೂಡಿಕೆದಾರರು ಕಂಪನಿಯಲ್ಲಿ ಶೇ 70.88 ರಷ್ಟು ಪಾಲನ್ನು ಹೊಂದಿದ್ದು, ಇದು ಸಿಂಗಾಪುರ್ ಸರ್ಕಾರದ ಶೇ 3.23 ರಷ್ಟು ಷೇರುಗಳನ್ನು ಒಳಗೊಂಡಿದೆ. 

ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಬಿಪಿ ಪಿಎಲ್ಸಿ ಮತ್ತು ರಾಯಲ್ ಡಚ್ ಶೆಲ್ ಪಿಎಲ್ಸಿ ಸೇರಿದಂತೆ ವಿಶ್ವದಾದ್ಯಂತದ ಕಂಪನಿಗಳಲ್ಲಿ ಪಾಲನ್ನು ಹೊಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು