ಶುಕ್ರವಾರ, ಜುಲೈ 30, 2021
25 °C

ಠಾಣೆಯಲ್ಲಿ ₹100ರ ಗಡಿ ದಾಟಿದ ಪೆಟ್ರೋಲ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಾದ್ಯಂತ ಗುರುವಾರ ಪೆಟ್ರೋಲ್‌ ದರ ಲೀಟರಿಗೆ 24 ಪೈಸೆ ಮತ್ತು ಡೀಸೆಲ್‌ ದರ ಲೀಟರಿಗೆ 29 ಪೈಸೆ ಹೆಚ್ಚಾಗಿದೆ. ಇದರಿಂದ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಪೆಟ್ರೋಲ್‌ ದರವು ಲೀಟರಿಗೆ ₹ 100ರ ಗಡಿ ದಾಟಿದೆ. ಠಾಣೆಯಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹100.06 ಮತ್ತು ಡೀಸೆಲ್‌ ದರ ₹ 91.99ರಷ್ಟಾಗಿದೆ.

ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ಹಲವು ರಾಜ್ಯಗಳಲ್ಲಿ ಪೆಟ್ರೋಲ್‌ ದರವು ಈಗಾಗಲೇ ₹ 100ರ ಗಡಿ ದಾಟಿದೆ. ಮುಂಬೈನಲ್ಲಿ ಪೆಟ್ರೋಲ್‌ ದರ ₹ 99.94 ಮತ್ತು ಡೀಸೆಲ್‌ ದರ ₹ 91.87ರಷ್ಟಿದೆ.

ದೆಹಲಿಯಲ್ಲಿ ಪೆಟ್ರೋಲ್‌ ದರ ₹ 93.84 ಮತ್ತು ಡೀಸೆಲ್‌ ದರ ₹ 84.61ರಷ್ಟಿದ್ದರೆ, ಬೆಂಗಳೂರಿನಲ್ಲಿ ಪೆಟ್ರೋಲ್‌ ₹ 96.80 ಮತ್ತು ಡೀಸೆಲ್‌ ₹ 89.70ಕ್ಕೆ ತಲುಪಿದೆ. ಮೇ ತಿಂಗಳಿನಲ್ಲಿ ಇದುವರೆಗೆ ಒಟ್ಟು 14 ಬಾರಿ ಇಂಧನ ದರ ಹೆಚ್ಚಿಸಿದಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು