ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಲೇ ಇದೆ ಪೆಟ್ರೋಲ್‌, ಡೀಸೆಲ್‌ ದರ: ಬೆಂಗಳೂರಿನಲ್ಲಿ ಎಷ್ಟು?

Last Updated 28 ನವೆಂಬರ್ 2020, 10:43 IST
ಅಕ್ಷರ ಗಾತ್ರ

ನವದೆಹಲಿ/ಬೆಂಗಳೂರು: ದೇಶದಾದ್ಯಂತ ಪೆಟ್ರೋಲ್‌, ಡೀಸೆಲ್‌ ದರಗಳು ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗುತ್ತಲೇ ಇವೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ನವೆಂಬರ್ 20 ರಿಂದ 28ರವರೆಗಿನ 9 ದಿನಗಳ ಅವಧಿಯಲ್ಲಿ 8 ದಿನಗಳು ಇಂಧನ ದರ ಹೆಚ್ಚಿಸಿವೆ. ಈ ಅವಧಿಯಲ್ಲಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ ದರ ₹ 1.11ರಷ್ಟು ಹಾಗೂ ಪ್ರತಿ ಲೀಟರ್‌ ಡೀಸೆಲ್‌ ದರ ₹1.77ರಷ್ಟು ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಶನಿವಾರ ಪ್ರತಿ ಲೀಟರ್‌ ಪೆಟ್ರೋಲ್‌ ದರ 24 ಪೈಸೆ ಹೆಚ್ಚಾಗಿದ್ದು ₹ 84.87ರಂತೆ ಮಾರಾಟವಾಗಿದೆ. ಡೀಸೆಲ್‌ ದರ 28 ಪೈಸೆ ಹೆಚ್ಚಾಗಿ ₹ 76.46ರಂತೆ ಮಾರಾಟವಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್‌ ದರ 24 ಪೈಸೆ ಹಾಗೂ ಡೀಸೆಲ್‌ ದರ 27 ಪೈಸೆ ಹೆಚ್ಚಾಗಿದ್ದು, ಕ್ರಮವಾಗಿ ₹ 82.13 ಹಾಗೂ ₹ 72.13ರಂತೆ ಮಾರಾಟವಾಗಿವೆ.

ಮುಂಬೈನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 88.58ರಿಂದ ₹ 88.81ಕ್ಕೆ ಹಾಗೂ ಡೀಸೆಲ್‌ ದರ ₹ 78.38 ರಿಂದ ₹ 78.66ಕ್ಕೆ ಏರಿಕೆಯಾಗಿದೆ.

ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ದರದಲ್ಲಿ ವ್ಯತ್ಯಾಸವಾಗಲಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಆಗುತ್ತಿದೆ. ಇದಕ್ಕೆ ಅನುಗುಣವಾಗಿ ದೇಶದಲ್ಲಿ ಕಂಪನಿಗಳು ಇಂಧನ ದರ ಹೆಚ್ಚಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT