ಮಂಗಳವಾರ, ಜೂನ್ 22, 2021
27 °C

ವಾರದಲ್ಲಿ 4ನೇ ಬಾರಿ ಪೆಟ್ರೋಲ್‌ ದರ ಹೆಚ್ಚಳ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ದರ ವಾರದಲ್ಲಿ ನಾಲ್ಕನೇಬಾರಿಗೆ ಹೆಚ್ಚಳವಾಗಿದ್ದು, ಶುಕ್ರವಾರ ಪೆಟ್ರೋಲ್‌ ದರ 29 ಪೈಸೆ ಮತ್ತು ಡೀಸೆಲ್‌ ದರ 34 ಪೈಸೆಯಷ್ಟು ಏರಿಕೆ ಕಂಡಿದೆ.

ಈಗಾಗಲೇ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್‌ ದರ ನೂರರ ಗಡಿ ದಾಟಿದ್ದು, ಇದೀಗ ಮುಂಬೈ ಮಹಾನಗರದಲ್ಲೂ ಪೆಟ್ರೋಲ್‌ ದರ ಲೀಟರ್‌ಗೆ ₹ 98.65ಕ್ಕೆ ತಲುಪಿದೆ. ಡೀಸೆಲ್‌ ಬೆಲೆ ಲೀಟರ್‌ಗೆ ₹ 90.11 ಆಗಿದೆ.

ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ದಾಖಲೆಯ ₹ 103.27ಕ್ಕೆ ನೆಗೆದಿದೆ. 

ಮೇ 4ರಿಂದೀಚೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಎಂಟನೇ ಬಾರಿಗೆ ಏರಿಕೆ ಉಂಟಾಗಿದೆ. ಈ ಏರಿಕೆಯಿಂದಾಗಿ ಕೇವಲ 10 ದಿನದೊಳಗೆ ಪೆಟ್ರೊಲ್‌ ಲೀಟರ್‌ ದರ ₹ 1.95ರಷ್ಟು ಮತ್ತು ಡೀಸೆಲ್‌ ದರ ₹ 2.22ರಷ್ಟು ಅಧಿಕವಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು