ಗುರುವಾರ , ಮೇ 6, 2021
31 °C

6 ದಿನದಲ್ಲಿ ಪೆಟ್ರೋಲ್‌ ₹ 3.31 ತುಟ್ಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಶುಕ್ರವಾರವೂ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪ್ರತಿ ಲೀಟರ್‌ಗೆ ಕ್ರಮವಾಗಿ 57 ಪೈಸೆ ಮತ್ತು 59 ಪೈಸೆಯಂತೆ ಹೆಚ್ಚಿಸಲಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಇಂಧನಗಳ ಮಾರಾಟ ಬೆಲೆ ಹೊಂದಾಣಿಕೆ ಮಾಡಲು ಸತತ 6ನೇ ದಿನವೂ ಬೆಲೆ ಏರಿಕೆ ಮಾಡಿವೆ. ಇದರಿಂದಾಗಿ ಪೆಟ್ರೋಲ್‌ ಬೆಲೆ ಭಾನುವಾರದಿಂದೀಚೆಗೆ ಪ್ರತಿ ಲೀಟರ್‌ಗೆ ₹ 3.31 ಮತ್ತು ಡೀಸೆಲ್‌ ₹ 3.42ರಂತೆ ತುಟ್ಟಿಯಾಗಿದೆ.

ಬೆಂಗಳೂರಿನಲ್ಲಿ ಈಗ ಪೆಟ್ರೋಲ್‌ ಬೆಲೆ ₹ 76.86  ಮತ್ತು ಡೀಸೆಲ್‌ ಬೆಲೆ ₹ 69.38ಕ್ಕೆ ತಲುಪಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು