ಭಾನುವಾರ, ಮೇ 9, 2021
28 °C

ವರ್ಷದಲ್ಲಿ ಮೊದಲ ಬಾರಿಗೆ ಪೆಟ್ರೋಲ್‌ ದರ 18 ಪೈಸೆ, ಡೀಸೆಲ್‌ 17 ಪೈಸೆ ಇಳಿಕೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೆಟ್ರೋಲ್‌ ದರ ಲೀಟರ್‌ಗೆ 18 ಪೈಸೆ ಮತ್ತು ಡೀಸೆಲ್‌ ದರ ಲೀಟರ್‌ಗೆ 17 ಪೈಸೆ ಕಡಿಮೆಯಾಗಿದೆ. ಒಂದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್‌ ದರದಲ್ಲಿ ಇಳಿಕೆಯಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿದಿರುವುದರಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಬುಧವಾರ ಕಡಿಮೆಯಾಗಿದೆ.

‘ದೆಹಲಿಯಲ್ಲಿ ಈ ಮುಂಚೆ ಪೆಟ್ರೋಲ್‌ ದರ ಲೀಟರ್‌ಗೆ ₹91.17 ಇತ್ತು. ಆದರೆ, ಬುಧವಾರ ₹90.99ಕ್ಕೆ ಇಳಿದಿದೆ. ಡೀಸೆಲ್‌ ದರ ಈ ಹಿಂದೆ ಲೀಟರ್‌ಗೆ ₹81.47 ಇತ್ತು. ಈಗ ಲೀಟರ್‌ಗೆ ₹ 81.30 ಇದೆ.

ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಕೆಯಾಗಿದೆ. ಆದರೆ ಸ್ಥಳೀಯ ಮೌಲ್ಯವರ್ಧಿತ ತೆರಿಗೆಯ (ವ್ಯಾಟ್‌) ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ಈ ದರವು ಬದಲಾಗುತ್ತದೆ.

ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಂಧನ ಬೆಲೆಯಲ್ಲಿ ಇಳಿಕೆಯಾಗಿದೆ. ಈ ಹಿಂದೆ ಮಾರ್ಚ್‌ 16, 2020ರಲ್ಲಿ ಇಂಧನ ದರವು ಇಳಿಕೆಯಾಗಿತ್ತು.

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಪೆಟ್ರೋಲ್‌ ಬೆಲೆ ₹100ರ ಗಡಿ ದಾಟಿತ್ತು.

ದರ ಪರಿಷ್ಕರಣೆ ನಂತರ ಮುಂಬೈನಲ್ಲಿ ಪೆಟ್ರೋಲ್‌ ದರವು ಲೀಟರ್‌ಗೆ ₹97.40 ಹಾಗೂ ಡೀಸೆಲ್‌ಗೆ ₹88.42 ಇದೆ.

ಇದನ್ನೂ ಓದಿ... ಬೆಂಗಳೂರು: ಒಂದೇ ವಾರದಲ್ಲಿ 160 ಮಕ್ಕಳಿಗೆ ಕೋವಿಡ್‌ ದೃಢ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು