ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್‌, ಡೀಸೆಲ್‌ ತುಸು ಅಗ್ಗ

Last Updated 18 ನವೆಂಬರ್ 2018, 12:56 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಇಂಧನ ದರಗಳು ನಿಧಾನವಾಗಿ ಇಳಿಕೆ ಕಾಣಲಾರಂಭಿಸಿವೆ. ಸರ್ಕಾರಿ ಸ್ವಾಮ್ಯದ ತೈಲ ಕಂಪ‍ನಿಗಳು ಸತತವಾಗಿ 29ನೇ ದಿನವೂ ದರದಲ್ಲಿ ಇಳಿಕೆ ಮಾಡಿವೆ.

ದೇಶದಾದ್ಯಂತ ಭಾನುವಾರ ಪ್ರತಿ ಲೀಟರ್‌ ಪೆಟ್ರೋಲ್‌ ದರ 20 ಪೈಸೆ ಮತ್ತು ಡೀಸೆಲ್‌ ದರ 18 ಪೈಸೆ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್‌ ₹ 77.32 ಹಾಗೂ ಡೀಸೆಲ್‌ ₹ 71.94ರಂತೆ ಮಾರಾಟವಾಗಿವೆ.

ಆಗಸ್ಟ್‌ನಿಂದ ಏರುಮುಖವಾಗಿದ್ದ ಇಂಧನ ದರಗಳು ಇದೀಗ ಒಂದು ತಿಂಗಳಿಂದ ಇಳಿಕೆ ಹಾದಿಗೆ ಮರಳಿವೆ.ಅಕ್ಟೋಬರ್‌ 18 ರಿಂದಲೂ ದರದಲ್ಲಿ ಇಳಿಕೆಯಾಗುತ್ತಿದೆ. ಆಗಸ್ಟ್‌ನಲ್ಲಿ ಏರಿಕೆಯಾಗಿದ್ದ ಪೆಟ್ರೋಲ್‌ ದರಕ್ಕೆ ಹೋಲಿಸಿದರೆ ಭಾನುವಾರದ ಅಂತ್ಯಕ್ಕೆ ಏರಿಕೆಯಾದಷ್ಟೇ ಇಳಿಕೆ ಕಂಡಿದೆ. ಇನ್ನು ಡೀಸೆಲ್‌ ದರದಲ್ಲಿ ಅರ್ಧದಷ್ಟು ಇಳಿಕೆಯಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಇಳಿಕೆ ಕಂಡುಬರುತ್ತಿದೆ. ರೂಪಾಯಿ ಮೌಲ್ಯವೂ ಚೇತರಿಕೆ ಹಾದಿಯಲ್ಲಿದೆ. ಈ ಕಾರಣಗಳಿಂದಾಗಿ ಇಂಧನಗಳ ಚಿಲ್ಲರೆ ಮಾರಾಟ ದರದಲ್ಲಿಯೂ ಇಳಿಕೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT