ನವದೆಹಲಿ/ಬೆಂಗಳೂರು: ಸರಿಸುಮಾರು ಎರಡು ತಿಂಗಳ ಬಳಿಕ ಶುಕ್ರವಾರ ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ದರಗಳಲ್ಲಿ ಏರಿಕೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರವನ್ನು 16 ಪೈಸೆ ಹೆಚ್ಚಿಸಲಾಗಿದ್ದು, ₹ 83.92ರಂತೆ ಮಾರಾಟವಾಗಿದೆ. ಡೀಸೆಲ್ ದರ 22 ಪೈಸೆ ಹೆಚ್ಚಳವಾಗಿದ್ದು, ₹ 74.91ರಂತೆ ಮಾರಾಟವಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ದರ 17 ಪೈಸೆ ಹಾಗೂ ಡೀಸೆಲ್ ದರ 22 ಪೈಸೆ ಹೆಚ್ಚಳವಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ 18 ಪೈಸೆ ಹಾಗೂ ಡೀಸೆಲ್ ದರ 25 ಪೈಸೆ ಹೆಚ್ಚಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಅಂತರರಾಷ್ಟ್ರೀಯ ಕಚ್ಚಾ ತೈಲ ದರ ಹಾಗೂ ವಿದೇಶಿ ವಿನಿಮಯ ದರದ ಆಧಾರದ ಮೇಲೆ ದಿನವೂ ಇಂಧನ ದರ ಪರಿಷ್ಕರಣೆ ಮಾಡುತ್ತವೆ. ಆದರೆ, ಕೋವಿಡ್–19 ಸಾಂಕ್ರಾಮಿಕದ ಕಾರಣದಿಂದಾಗಿ ಮಾರ್ಚ್ 17ರಿಂದ ಜೂನ್ 6ರವರೆಗೆ ಹಾಗೂ ಜೂನ್ 30ರಿಂದ ಆಗಸ್ಟ್ 15ರವರೆಗಿನ ಅವಧಿಯಲ್ಲಿ ಇಂಧನ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದವು. ಆ ಬಳಿಕ ಪೆಟ್ರೋಲ್ ದರ ಸೆಪ್ಟೆಂಬರ್ 22ರವರೆಗೂ ಏರಿಳಿತ ಆಗಿತ್ತು. ಆದರೆ, ಡೀಸೆಲ್ ದರದಲ್ಲಿ ಅಕ್ಟೋಬರ್ 2ರವರೆಗೂ ಯಾವುದೇ ಬದಲಾವಣೆ ಆಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ನಗರವಾರು ವಿವರ (ಪ್ರತಿ ಲೀಟರಿಗೆ)

ನಗರ;ಪೆಟ್ರೋಲ್;ಡೀಸೆಲ್

ಬೆಂಗಳೂರು;₹ 83.92;₹ 74.91

ದೆಹಲಿ;₹ 81.23;₹70.68

ಮುಂಬೈ;₹ 87.92;₹77.11

ಚೆನ್ನೈ;₹ 84.31;₹76.11

ಕೋಲ್ಕತ್ತ;₹ 82.79;74.24

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.