ಶನಿವಾರ, ಜನವರಿ 25, 2020
15 °C

ಕಚ್ಚಾ ತೈಲ ದರ ಹೆಚ್ಚಳ; ಏರುತ್ತಿದೆ ಪೆಟ್ರೋಲ್‌, ಡೀಸೆಲ್‌ ಬೆಲೆ 

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಪೆಟ್ರೋಲ್‌, ಡೀಸೆಲ್‌ ದರದ ಬೋರ್ಡ್‌ ಹಿಡಿದಿರುವ ಪೆಟ್ರೋಲ್‌ ಬಂಕ್‌ನ ಸಿಬ್ಬಂದಿ– ಸಾಂದರ್ಭಿಕ ಚಿತ್ರ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗುತ್ತಿರುವ ಪರಿಣಾಮ ಭಾರತದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಹೆಚ್ಚಳಗೊಂಡಿದೆ. ತೈಲ ಸಮೃದ್ಧ ಮಧ್ಯ ಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆ, ಅಮೆರಿಕದ ಬೆದರಿಕೆಯ ಹೇಳಿಕೆಗಳಿಂದಾಗಿ ಕಚ್ಚಾ ತೈಲ ದರ ಬ್ಯಾರೆಲ್‌ಗೆ 70 ಡಾಲರ್‌ ಮೀರಿದೆ. 

ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ₹ 75.69 ಮತ್ತು ಪ್ರತಿ ಲೀಟರ್‌ ಡೀಸೆಲ್‌ ₹ 68.68 ಆಗಿದೆ. ಪೆಟ್ರೋಲ್‌ ದರದಲ್ಲಿ 15 ಪೈಸೆ ಹಾಗೂ ಡೀಸೆಲ್‌ 17 ಪೈಸೆ ಹೆಚ್ಚಳವಾಗಿದೆ. ಸೋಮವಾರ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ₹ 78.22 ಮತ್ತು ಡೀಸೆಲ್‌ ದರ ₹ 70.97 ಆಗಿದೆ. 

ಇದನ್ನೂ ಓದಿ: ಷೇರು ಪೇಟೆ ಕುಸಿತ; ಕರಗಿದ ₹ 3.11 ಲಕ್ಷ ಕೋಟಿ 

ಜನವರಿ 2ರಿಂದ ಪ್ರತಿ ಲೀಟರ್‌ ಪೆಟ್ರೋಲ್‌ 53 ಪೈಸೆ, ಡೀಸೆಲ್‌ 72 ಪೈಸೆ ಹೆಚ್ಚಳವಾಗಿದೆ. ಕಳೆದ ಡಿಸೆಂಬರ್‌ನಿಂದ ಡೀಸೆಲ್‌ ದರ ₹ 2.95 ಹಾಗೂ ಪೆಟ್ರೋಲ್‌ ದರ ₹ 1.06 ಏರಿಕೆಯಾಗಿದೆ.

ತೈಲ ದರ ಹೆಚ್ಚಳದೊಂದಿಗೆ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿದಿದೆ ಹಾಗೂ ಚಿನ್ನ ದರ ಆರು ವರ್ಷಗಳ ಗರಿಷ್ಠ ಮಟ್ಟ ತಲುಪಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಯು ನಿತ್ಯ ಬಳಕೆ ವಸ್ತುಗಳ ಬೆಲೆಯ ನೇರ ಪರಿಣಾಮ ಬೀರಬಹುದಾಗಿದೆ. 

ಬ್ರೆಂಟ್‌ ಕಚ್ಚಾ ತೈಲ ಬ್ಯಾರೆಲ್‌ಗೆ ಶೇ 3.1ರಷ್ಟು ಏರಿಕೆಯೊಂದಿಗೆ 70.74 ಡಾಲರ್‌ ತಲುಪಿದೆ. ದೇಶದ ಷೇರು ಪೇಟೆಗಳಲ್ಲಿ ಸೋಮವಾರ ತಲ್ಲಣ ಉಂಟಾಗಿದ್ದು, ಸೆನ್ಸೆಕ್ಸ್‌ 787 ಅಂಶ ಕುಸಿಯುವ ಮೂಲಕ ಹೂಡಿಕೆದಾರರ ₹ 3.11 ಲಕ್ಷ ಕೋಟಿ ಕರಗಿದೆ. 

ಇದನ್ನೂ ಓದಿ: 

ಭಾರತ ಶೇ 84ರಷ್ಟು ತೈಲ ಆಮದು ಮಾಡಿಕೊಳ್ಳುವ ಮೂಲಕ ತೈಲ ಬೇಡಿಕೆ ಪೂರೈಸಿಕೊಳ್ಳುತ್ತಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರದಲ್ಲಿ ಯಾವುದೇ ವ್ಯತ್ಯಾಸವು ದೇಶದ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುತ್ತದೆ. ಸರ್ಕಾರ ಅಡುಗೆ ಅನಿಲ ದರದ ಮೇಲೆ ನೀಡುವ ಸಬ್ಸಿಡಿಗೂ ಇದರಿಂದ ಹೊರೆಯಾಗಬಹುದಾಗಿದೆ. 

ಇರಾಕ್‌ ಮತ್ತು ಸೌದಿ ಅರೇಬಿಯಾ ಮಧ್ಯ ಪ್ರಾಚ್ಯದ ಪ್ರಮುಖ ತೈಲ ಪೂರೈಕೆದಾರ ರಾಷ್ಟ್ರಗಳಾಗಿವೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು