ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ವೇ ಬಿಲ್‌ಗೆ ಪಿನ್‌ಕೋಡ್‌ ಕಡ್ಡಾಯ

Last Updated 3 ಅಕ್ಟೋಬರ್ 2018, 19:11 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಡಿ ಸರಕುಗಳ ಸಾಗಾಣಿಕೆ ಉದ್ದೇಶಕ್ಕೆ ಇ–ವೇ ಬಿಲ್‌ ಪಡೆಯುವಾಗ ‘ಪಿನ್‌ಕೋಡ್‌’ ನಮೂದಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಸರಕು ಹೇರುವ ಮತ್ತು ಇಳಿಸುವ ಸ್ಥಳಗಳ ‘ಪಿನ್‌ಕೋಡ್‌’ ನಮೂದಿಸುವುದರಿಂದ ಸರಕು ಸಾಗಿಸುವ ದೂರವನ್ನು ಖಚಿತವಾಗಿ ತಿಳಿದುಕೊಳ್ಳಲು ಮತ್ತು ಇ–ವೇಲ್‌ ಬಿಲ್‌ನ ಸಿಂಧುತ್ವವನ್ನು ನಿರ್ಧರಿಸಲು ಸಾಧ್ಯವಾಗಲಿದೆ ಎಂದು ಜಿಎಸ್‌ಟಿಎನ್‌ ತಿಳಿಸಿದೆ.

₹ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಸರಕುಗಳನ್ನು ರಾಜ್ಯದ ಒಳಗೆ ಮತ್ತು ಬೇರೆ ರಾಜ್ಯಗಳಿಗೆ ಸಾಗಿಸಲು ಇ–ವೇ ಬಿಲ್‌ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

ಇ–ವೇ ಬಿಲ್‌ಗಳ ಸಿಂಧುತ್ವವು ವಹಿವಾಟುದಾರರು ನಮೂದಿಸುವ ಅಂತರವನ್ನು ಅವಲಂಬಿಸಿರುತ್ತದೆ. ಸರಕು ಸಾಗಣೆದಾರರು ಒಂದೇ ಇ–ವೇ ಬಿಲ್‌ ಬಳಸಿಕೊಂಡು ಒಂದಕ್ಕಿಂತ ಹೆಚ್ಚು ಬಾರಿಗೆ ಸರಕು ಸಾಗಿಸುವುದನ್ನು ರೂಢಿಸಿಕೊಂಡಿದ್ದಾರೆ. ಇದರಿಂದ ತೆರಿಗೆ ವಂಚಿಸಲು ಸಾಧ್ಯವಾಗುತ್ತಿದೆ. ಇದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಪರಿಷ್ಕೃತ ನಿಯಮಗಳ ಪ್ರಕಾರ, ಪಿನ್‌ಕೋಡ್‌ ನಮೂದಿಸುವುದರಿಂದ ಇ–ವೇ ಬಿಲ್‌ ಪಡೆಯುವುದೂ ಸುಲಭವಾಗಲಿದೆ.

ಇ–ವೇ ಬಿಲ್‌ ನೋಂದಣಿ

24.53 ಲಕ್ಷ: ತೆರಿಗೆದಾರರು

31,232: ಸರಕು ಸಾಗಣೆದಾರರು

***

25.32 ಕೋಟಿ: ಏಪ್ರಿಲ್‌ 1ರಿಂದ ಸೆಪ್ಟೆಂಬರ್‌ 30ರ ಅವಧಿಯಲ್ಲಿ ಬಳಕೆಯಾದ ಇ–ವೇ ಬಿಲ್‌ಗಳ ಸಂಖ್ಯೆ

12.12 ಕೋಟಿ: ರಾಜ್ಯದ ಒಳಗೆ ಸರಕು ಸಾಗಣೆ

13.20 ಕೋಟಿ: ರಾಜ್ಯದಿಂದ ರಾಜ್ಯಕ್ಕೆ ಸರಕು ಸಾಗಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT