ನವದೆಹಲಿ: ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಸಂಸ್ಥೆ ಪ್ರೆಸ್ಟೀಜ್ ಗ್ರೂಪ್, 2023–24ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ (ಅಕ್ಟೋಬರ್–ಡಿಸೆಂಬರ್) ಮನೆಗಳ ಮಾರಾಟ ಮತ್ತು ಬುಕಿಂಗ್ನಲ್ಲಿ ₹5,326.1 ಕೋಟಿ ವಹಿವಾಟು ನಡೆಸಿರುವುದಾಗಿ ಹೇಳಿದೆ.

ಹಿಂದಿನ ಹಣಕಾಸು ವರ್ಷದ ಅಕ್ಟೋಬರ್–ಡಿಸೆಂಬರ್ ಅವಧಿಗೆ ಹೋಲಿಸಿದರೆ ಮನೆಗಳ ಬುಕಿಂಗ್ನಲ್ಲಿ ಶೇ 111ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

ಈ ತ್ರೈಮಾಸಿಕದಲ್ಲಿ 54.6 ಲಕ್ಷ ಚದರ ಅಡಿ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಚದರ ಅಡಿಗೆ ಸರಾಸರಿ ₹9,762 ದರ ಪಡೆಯಲಾಗಿದೆ (ಅಪಾರ್ಟ್ಮೆಂಟ್ ಮತ್ತು ವಿಲ್ಲಾ) ಎಂದು ತಿಳಿಸಿದೆ.

2023ರ ಏಪ್ರಿಲ್ನಿಂದ ಡಿಸೆಂಬರ್ವರೆಗೆ ಪ್ರೇಸ್ಟೀಜ್ ಎಸ್ಟೇಟ್ಸ್ ಮನೆಗಳ ಮಾರಾಟ ಮತ್ತು ಬುಕಿಂಗ್ನಲ್ಲಿ ₹16,333.4 ಕೋಟಿಯಷ್ಟು ವಹಿವಾಟು ನಡೆದಿದೆ. 2022ಕ್ಕೆ ಹೋಲಿಸಿದರೆ ಈ ಒಂಬತ್ತು ತಿಂಗಳಲ್ಲಿ ಮಾರಾಟವು ಶೇ 81ರಷ್ಟು ಏರಿಕೆಯಾಗಿದೆ. ಒಟ್ಟು 8,402 ಮನೆಗಳು ಮಾರಾಟವಾಗಿವೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.