ಬುಧವಾರ, ಸೆಪ್ಟೆಂಬರ್ 28, 2022
26 °C

ಅಮುಲ್ ಹಾಲಿನ ಬೆಲೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಆನಂದ್: ಗುಜರಾತ್ ಸಹಕಾರ ಹಾಲು ಮಾರಾಟ ಮಹಾಮಂಡಳವು (ಜಿಸಿಎಂಎಂಎಫ್) ಅಮೂಲ್‌ ಬ್ರ್ಯಾಂಡ್‌ ಅಡಿಯಲ್ಲಿ ಮಾರಾಟ ಮಾಡುವ ಹಾಲಿನ ದರವನ್ನು ಲೀಟರಿಗೆ ₹ 2ರಷ್ಟು ಹೆಚ್ಚಿಸಿದೆ.

‘ಗೋಲ್ಡ್‌’, ‘ತಾಜಾ’ ಮತ್ತು ‘ಶಕ್ತಿ’ ಹೆಸರಿನಲ್ಲಿ ಮಾರಾಟವಾಗುವ ಹಾಲಿನ ಬೆಲೆ ಬುಧವಾರದಿಂದ ಜಾಸ್ತಿ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಕಾರಣ ಈ ಬೆಲೆ ಏರಿಕೆ ಎಂದು ಅದು ಹೇಳಿದೆ. ಒಂದು ವರ್ಷದಲ್ಲಿ ಪಶು ಆಹಾರದ ಬೆಲೆಯು ಸರಿಸುಮಾರು ಶೇಕಡ 20ರಷ್ಟು ಜಾಸ್ತಿ ಆಗಿದೆ ಎಂದು ಮಹಾಮಂಡಳವು ತಿಳಿಸಿದೆ. ಗ್ರಾಹಕರು ನೀಡುವ ಹಣದಲ್ಲಿ ಶೇ 80ರಷ್ಟನ್ನು ಅಮುಲ್, ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು