ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿಣ ಅದಿರು ಉತ್ಪಾದನೆ ಶೇ 4ರಷ್ಟು ಏರಿಕೆ

Published 1 ಜೂನ್ 2024, 14:24 IST
Last Updated 1 ಜೂನ್ 2024, 14:24 IST
ಅಕ್ಷರ ಗಾತ್ರ

ನವದೆಹಲಿ: ಕಬ್ಬಿಣದ ಅದಿರು, ಸುಣ್ಣದ ಕಲ್ಲು ಮತ್ತು ಅಲ್ಯೂಮಿನಿಯಂ ಉತ್ಪಾದನೆ 2024–25ರ ಹಣಕಾಸು ವರ್ಷದ ಮೊದಲ ತಿಂಗಳಾದ ಏಪ್ರಿಲ್‌ನಲ್ಲಿ ಏರಿಕೆ ಆಗಿದೆ ಎಂದು ಗಣಿ ಸಚಿವಾಲಯ ತಿಳಿಸಿದೆ.

ಕಬ್ಬಿಣದ ಅದಿರು ಉತ್ಪಾದನೆ ಶೇ 4ರಷ್ಟು ಏರಿಕೆಯಾಗಿದ್ದು, 2.6 ಕೋಟಿ ಟನ್‌ ಉತ್ಪಾದನೆ ಆಗಿದೆ. ಹಿಂದಿನ ವರ್ಷದ ಇದೇ ತಿಂಗಳಲ್ಲಿ 2.5 ಕೋಟಿಯಷ್ಟಿತ್ತು. 

ಸುಣ್ಣದ ಕಲ್ಲು ಉತ್ಪಾದನೆ 3.85 ಕೋಟಿ ಟನ್‌ನಿಂದ 3.93 ಟನ್‌ಗೆ ಹೆಚ್ಚಳವಾಗಿದೆ. ಅಲ್ಯೂಮಿನಿಯಂ ಉತ್ಪಾದನೆ ಶೇ 1ರಷ್ಟು ಏರಿಕೆಯಾಗಿದ್ದು, 3.42 ಲಕ್ಷ ಟನ್‌ ಆಗಿದೆ.

ಪ್ರಸ್ತುತ ಹಣಕಾಸು ವರ್ಷದ ಏಪ್ರಿಲ್‌ನಲ್ಲಿ ಕಬ್ಬಿಣದ ಅದಿರು ಮತ್ತು ಸುಣ್ಣದಕಲ್ಲು ಉತ್ಪಾದನೆ ಏರಿಕೆಯಾಗಿದೆ. ಇದು ಉಕ್ಕು ಮತ್ತು ಸಿಮೆಂಟ್‌ ಕೈಗಾರಿಕೆಗಳಲ್ಲಿನ ದೃಢವಾದ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ. ಅಲ್ಯೂಮಿನಿಯಂ ಹೆಚ್ಚಳವು ಇಂಧನ, ಮೂಲಸೌಕರ್ಯ, ನಿರ್ಮಾಣ, ವಾಹನ ಮತ್ತು ಯಂತ್ರೋಪಕರಣಗಳಲ್ಲಿನ ಬಳಕೆಯ ಹೆಚ್ಚಳವನ್ನು ಸೂಚಿಸುತ್ತದೆ ಎಂದು ಗಣಿ ಸಚಿವಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT