ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಉದ್ಯಮಿಗಳಿಗೆ ನೆರವು ಅಗತ್ಯ: ಶಕ್ತಿಕಾಂತ ದಾಸ್‌

ಹಣಕಾಸು ಸಂಸ್ಥೆಗಳು, ಬ್ಯಾಂಕ್‌ಗಳು ಸೂಕ್ತ ಯೋಜನೆ ರೂಪಿಸಬೇಕು: ಶಕ್ತಿಕಾಂತ ದಾಸ್‌
Published : 5 ಸೆಪ್ಟೆಂಬರ್ 2024, 15:38 IST
Last Updated : 5 ಸೆಪ್ಟೆಂಬರ್ 2024, 15:38 IST
ಫಾಲೋ ಮಾಡಿ
Comments

ಮುಂಬೈ: ಮಹಿಳಾ ಉದ್ಯಮಿಗಳು ನಡೆಸುತ್ತಿರುವ ವ್ಯವಹಾರವನ್ನು ಉತ್ತೇಜಿಸಲು ಸೂಕ್ತ ಯೋಜನೆಗಳನ್ನು ರೂಪಿಸಬೇಕಿದೆ ಎಂದು ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ. 

ಮಹಿಳೆಯರಿಗೆ ಹೆಚ್ಚು ಉದ್ಯೋಗ ಅವಕಾಶಗಳನ್ನು ಒದಗಿಸುವ ಮೂಲಕ ಲಿಂಗ ತಾರತಮ್ಯ ತಗ್ಗಿಸಲು ಹಣಕಾಸು ವಲಯವು ಸಹಾಯ ಮಾಡಲಿದೆ. ದೇಶದ ಪ್ರತಿ ಪ್ರಜೆಗೆ ಅವರ ಸಾಮಾಜಿಕ–ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ, ಹಣಕಾಸು ಸೇವೆ ಮತ್ತು ಹಣಕಾಸು ಸಾಕ್ಷರತೆ ಒದಗಿಸಬೇಕಿದೆ ಎಂದು ಎಫ್‌ಐಸಿಸಿಐ ಮತ್ತು ಐಬಿಎ ಜಂಟಿಯಾಗಿ ಗುರುವಾರ ಆಯೋಜಿಸಿದ್ದ ವಾರ್ಷಿಕ ಎಫ್‌ಐಬಿಎಸಿ ಸಮ್ಮೇಳನದಲ್ಲಿ ಮಾತನಾಡಿದರು.

ಜಾಗತಿಕ ಸರಾಸರಿಗೆ ಹೋಲಿಸಿದರೆ ಭಾರತದ ಕಾರ್ಮಿಕ ವಲಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಕಡಿಮೆ ಇದೆ. ಈ ಅಂತರವು, ಬಾಲಕಿಯರ ಶಿಕ್ಷಣ, ಕೌಶಲ ಅಭಿವೃದ್ಧಿ, ಕೆಲಸದ ಸ್ಥಳದಲ್ಲಿ ಸುರಕ್ಷತೆ ಮತ್ತು ಸಾಮಾಜಿಕ ಅಡೆತಡೆಗಳನ್ನು ಪರಿಹರಿಸುವಂತಹ ಕ್ರಮಗಳ ತುರ್ತು ಅಗತ್ಯವನ್ನು ಸೂಚಿಸುತ್ತದೆ ಎಂದರು.

ಹಣಕಾಸು ಸಂಸ್ಥೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುವುದು ಮತ್ತು ಸರ್ಕಾರದ ಯೋಜನೆಗಳಿಂದ ಮಹಿಳಾ ಉದ್ಯಮಿಗಳಿಗೆ ನೆರವು ನೀಡಬೇಕಿದೆ ಎಂದು ಹೇಳಿದರು.

ಹೆಚ್ಚಿನ ಯುವ ಸಮೂಹದೊಂದಿಗೆ, ಉದ್ಯೋಗ ಮತ್ತು ಆರ್ಥಿಕ ಪ್ರಗತಿಯನ್ನು ಹೆಚ್ಚಿಸಲು ಎಂಎಸ್‌ಎಂಇಗಳ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಅವಶ್ಯಕತೆಯಿದೆ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ನಿರ್ದಿಷ್ಟವಾಗಿ ಎಂಎಸ್‌ಎಂಇಗಳ ಅಗತ್ಯಗಳನ್ನು ಪೂರೈಸುವ ಸೂಕ್ತ ಹಣಕಾಸು ಯೋಜನೆ ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಬಹುದು. ಇಂತಹ ಕ್ರಮಗಳು ಎಂಎಸ್‌ಎಂಇಗಳನ್ನು ವಿಸ್ತರಿಸಲು, ಅವುಗಳ ಉತ್ಪಾದಕತೆಯನ್ನು ಹೆಚ್ಚಿಸಲು, ಉದ್ಯೋಗ ಸೃಷ್ಟಿಗೆ ಹೆಚ್ಚು ಕೊಡುಗೆ ನೀಡಲು ಉತ್ತೇಜಿಸುತ್ತವೆ ಎಂದು ದಾಸ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT