ಚೆನ್ನೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್) ಶತಮಾನೋತ್ಸವದ ಹಿನ್ನೆಲೆಯಲ್ಲಿ ವಿಶೇಷ ಅಂಚೆ ಚೀಟಿ ಮತ್ತು ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿರುವುದನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಖಂಡಿಸಿದ್ದಾರೆ.

ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ ಕೋಮುವಾದಿ ಅಂಶದ ಚಿಂತನೆಯನ್ನು ರೂಪಿಸಿದ ಸಂಘಟನೆಯ ಶತಮಾನೋತ್ಸವವನ್ನು ಆಚರಿಸುವ ದಯನೀಯ ಸ್ಥಿತಿಯಿಂದ ಭಾರತವನ್ನು ರಕ್ಷಿಸಬೇಕು ಎಂದಿದ್ದಾರೆ.

ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಅವರು, ಭಾರತ ಒಂದು ಜಾತ್ಯತೀತ ದೇಶ. ಮಹಾತ್ಮ ಗಾಂಧಿ ಅದಕ್ಕೆ ಮೂಲ ತತ್ವವನ್ನು ಬಿತ್ತಿದ್ದರು ಎಂದು ಹೇಳಿದ್ದಾರೆ.

'ವಿಭಜಕ ಶಕ್ತಿಗಳು ಜನರಲ್ಲಿ ದ್ವೇಷದ ಬೀಜಗಳನ್ನು ಬಿತ್ತಿದಾಗಲೆಲ್ಲ ಅವುಗಳನ್ನು ಎದುರಿಸಲು ನಮಗೆ ಗಾಂಧೀಜಿ ತತ್ವಗಳು ಶಕ್ತಿಯನ್ನು ಒದಗಿಸುತ್ತದೆ’ಎಂದು ಸ್ಟಾಲಿನ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

‘ದೇಶದ ನಾಯಕತ್ವದ ಉಸ್ತುವಾರಿ ವಹಿಸಿರುವವರು (ಪ್ರಧಾನಿ) ರಾಷ್ಟ್ರಪಿತನನ್ನು ಕೊಂದವನಿಗೆ ಕೋಮುವಾದಿ ಚಿಂತನೆ ತುಂಬಿದ್ದ ಆರ್ಎಸ್ಎಸ್ ಚಳವಳಿಯ ಶತಮಾನೋತ್ಸವದಂದು ವಿಶೇಷ ಅಂಚೆ ಚೀಟಿಗಳು ಮತ್ತು ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡುವ ದಯನೀಯ ಸ್ಥಿತಿಯಿಂದ ಭಾರತವನ್ನು ರಕ್ಷಿಸಬೇಕು’ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಗಾಂಧಿ ಜಯಂತಿಯಂದು ದೇಶದ ಎಲ್ಲಾ ಜನರು ತೆಗೆದುಕೊಳ್ಳಬೇಕಾದ ಪ್ರತಿಜ್ಞೆ ಇದು ಎಂದಿದ್ದಾರೆ.

ಗಾಂಧಿ ಜಯಂತಿಯ ಮುನ್ನಾದಿನ ಆರ್ಎಸ್ಎಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ₹100 ನಾಣ್ಯ ಬಿಡುಗಡೆ ಮಾಡಿದ್ದರು.
.ಶಾಲಾ ಮಕ್ಕಳಿಗೆ ಶೀಘ್ರವೇ ಆರ್ಎಸ್ಎಸ್ ಬಗ್ಗೆ ಬೋಧನೆ: ದೆಹಲಿ ಶಿಕ್ಷಣ ಸಚಿವ.ಆಳ–ಅಗಲ | RSS History: ಆರ್ಎಸ್ಎಸ್ @100.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.