ಹಿಂದೂ ರಾಷ್ಟ್ರೀಯವಾದಿ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್ಎಸ್ಎಸ್) ಶತಮಾನ ಪೂರೈಸಿದೆ. ಹಿಂದುತ್ವದ ತಾತ್ವಿಕತೆಯಿಂದ ಪ್ರಭಾವಿತರಾಗಿದ್ದ ಕೇಶವ ಬಲಿರಾಮ ಹೆಡ್ಗೇವಾರ್ ಅವರು 1925ರ ಸೆ.27ರಂದು ವಿಜಯದಶಮಿ ದಿನದಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಆರ್ಎಸ್ಎಸ್ ಸ್ಥಾಪಿಸಿದರು. ತಮ್ಮದು ಸಾಂಸ್ಕೃತಿಕ ಸಂಘಟನೆಯಾಗಿದ್ದು, ಹಿಂದೂ ಸಂಸ್ಕೃತಿ, ಹಿಂದೂ ಒಗ್ಗಟ್ಟು ಮತ್ತು ರಾಷ್ಟ್ರ ಸ್ವಾವಲಂಬನೆ ಸಾಧಿಸುವುದು ತಮ್ಮ ಆಶಯ ಎಂದು ಸಂಘಟನೆಯ ಮುಖಂಡರು ಪ್ರತಿಪಾದಿಸುತ್ತಾರೆ.

ಆರ್ಎಸ್ಎಸ್, ದೇಶದ ಬಹುತೇಕ ರಾಜ್ಯ, ಜಿಲ್ಲೆ, ತಾಲ್ಲೂಕು, ಹೋಬಳಿಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಸಂಘದ ಸದಸ್ಯರಿಗೆ ನಿಗದಿತವಾಗಿ ಸ್ವಯಂ ರಕ್ಷಣೆ ಸೇರಿದಂತೆ ವಿವಿಧ ರೀತಿಯ ತರಬೇತಿ, ಸೈದ್ಧಾಂತಿಕ ಶಿಕ್ಷಣ ನೀಡಲಾಗುತ್ತದೆ. ದೇಶದಲ್ಲಿ ಒಟ್ಟು 83,000 ಶಾಖೆಗಳಿವೆ ಎನ್ನಲಾಗುತ್ತಿದ್ದು, ಅವುಗಳಲ್ಲಿ ಹಿಂದುತ್ವ, ಹಿಂದೂ ರಾಷ್ಟ್ರೀಯತೆಯನ್ನು ಕೇಂದ್ರೀಕರಿಸಿ ನಿರಂತರ ಚಟುವಟಿಕೆಗಳನ್ನು ನಡೆಸಲಾಗುತ್ತದೆ.

ಸರಸಂಘಚಾಲಕ, ಸಂಘದ ಪರಮೋಚ್ಚ ಸ್ಥಾನ ಪಡೆದಿದ್ದರೆ, ನಂತರದ ಸ್ಥಾನದಲ್ಲಿ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ಇರುತ್ತಾರೆ. ಪ್ರಸ್ತುತ ಮೋಹನ ಭಾಗವತ್ ಅವರು ಸರಸಂಘಚಾಲಕರಾಗಿದ್ದರೆ, ದತ್ತಾತ್ರೇಯ ಹೊಸಬಾಳೆ ಅವರು ಸರಕಾರ್ಯವಾಹ ಆಗಿದ್ದಾರೆ.

ಬಿಜೆಪಿಯ ಸೈದ್ಧಾಂತಿಕ ಮುಖ: ಆರ್ಎಸ್ಎಸ್ ರಾಜಕೀಯ ಸಂಘಟನೆ ಅಲ್ಲ ಎಂದು ಅದರ ಮುಖಂಡರು ಪ್ರತಿಪಾದಿಸುತ್ತಾರೆ. ಆದರೆ, ಅದರ ರಾಜಕೀಯ ವಿಭಾಗವೇ ಬಿಜೆಪಿ ಎನ್ನುವುದು ಗುಟ್ಟೇನೂ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಆರಂಭಿಸಿ ಅಮಿತ್ ಶಾ, ರಾಜನಾಥ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್, ನಿತಿನ್ ಗಡ್ಕರಿವರೆಗೆ ಎಲ್ಲರೂ ಮೊದಲು ಆರ್ಎಸ್ಎಸ್ ಕಾರ್ಯಕರ್ತರಾಗಿದ್ದವರೇ. ಈ ಹಿಂದೆ ಬಿಜೆಪಿಯಿಂದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ, ಸಚಿವರಾಗಿದ್ದ ಲಾಲ್ಕೃಷ್ಣ ಅಡ್ವಾಣಿ ಸೇರಿದಂತೆ ಪಕ್ಷದ ಹಲವು ಹಿರಿಯ ಮುಖಂಡರು ಕೂಡ ಸಂಘದಲ್ಲಿ ಸಕ್ರಿಯರಾಗಿದ್ದವರೇ. ದೇಶದ ಪ್ರಮುಖ ರಾಜಕೀಯ ಪಕ್ಷದ ಬೆನ್ನೆಲುಬಾಗಿ ಬೃಹತ್ ಸಂಖ್ಯೆಯ ಕಾರ್ಯಕರ್ತರನ್ನು ಹೊಂದಿರುವ ಆರ್ಎಸ್ಎಸ್ನಂಥ ‘ಸಾಂಸ್ಕೃತಿಕ ಸಂಘಟನೆ’ ಇರುವ ನಿದರ್ಶನ ಜಗತ್ತಿನ ಬೇರೆ ಯಾವುದೇ ದೇಶದಲ್ಲಿಯೂ ಇಲ್ಲ ಎನ್ನುವ ಮಾತುಗಳಿವೆ. ತಳಮಟ್ಟದಲ್ಲಿ ಸಂಘಕ್ಕೆ ಇರುವ ಸಂಪರ್ಕಗಳೇ ಬಿಜೆಪಿಯ ಪಾಲಿಗೆ ಶಕ್ತಿಯಾಗಿದ್ದು, ಪಕ್ಷದ ಚುನಾವಣಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.

ಬಿಜೆಪಿ ಕಾಲದಲ್ಲಿ ಅನುಷ್ಠಾನಗೊಂಡ/ಜಾರಿಯಾದ ಯೋಜನೆಗಳು ಜನಸಂಘ ಮತ್ತು ಆರ್ಎಸ್ಎಸ್ ಕಾರ್ಯಸೂಚಿಯಲ್ಲಿ ಇದ್ದಂಥವು. ಬಿಜೆಪಿಯು ದಶಕಗಳಿಂದಲೂ ಪ್ರತಿಪಾದಿಸುತ್ತಿರುವ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ಗೋಹತ್ಯಾ ನಿಷೇಧ, ಏಕರೂಪ ನಾಗರಿಕ ಸಂಹಿತೆ ಜಾರಿ ಇವೆಲ್ಲವೂ ಆರ್ಎಸ್ಎಸ್ನ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಪೂರಕ ಎನ್ನುವ ವಿಶ್ಲೇಷಣೆಗಳಿವೆ.

ಮಹಿಳೆಯರಿಗೆ ಪ್ರತ್ಯೇಕ ಸಂಘಟನೆ

ಸಂಘದ ಸದಸ್ಯರಾಗಲು ಯಾವುದೇ ವಿಧಿ–ವಿಧಾನಗಳನ್ನು ಅನುಸರಿಸಬೇಕಿಲ್ಲ ಎಂದು ಆರ್ಎಸ್ಎಸ್ ಹೇಳುತ್ತದೆ. ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಯಾವುದೇ ನೋಂದಣಿ ಅಗತ್ಯವಿಲ್ಲದೇ ಯಾರು ಬೇಕಾದರೂ (ಪುರುಷರು ಮಾತ್ರ) ಸಂಘದ ಸದಸ್ಯರಾಗಬಹುದು, ಸ್ವಯಂಸೇವಕರಾಗಬಹುದು; ಆದರೆ, ಮಹಿಳೆಯರಿಗೆ ಸದಸ್ಯತ್ವ ನೀಡಲಾಗುವುದಿಲ್ಲ. ಮಹಿಳೆಯರು 1936ರಲ್ಲಿ ಆರಂಭವಾಗಿರುವ ರಾಷ್ಟ್ರ ಸೇವಿಕಾ ಸಮಿತಿಯ ಸದಸ್ಯರಾಗಬಹುದು ಎಂದು ಅದು ತಿಳಿಸಿದೆ.

ಸಂಘ ಪರಿವಾರ

ಆರ್ಎಸ್ಎಸ್ ಹಲವು ಸಂಘಟನೆಗೊಂದಿಗೆ ಪ್ರತ್ಯಕ್ಷ/ಪರೋಕ್ಷ ನಂಟು ಹೊಂದಿದೆ. ಭಾರತೀಯ ಜನತಾ ಪಕ್ಷ, ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸ್ವದೇಶಿ ಜಾಗರಣ ಮಂಚ್, ವನವಾಸಿ ಕಲ್ಯಾಣ ಆಶ್ರಮ, ರಾಷ್ಟ್ರೀಯ ಸಿಖ್ ಸಂಘ, ಹಿಂದೂ ಯುವವಾಹಿನಿ, ಭಾರತೀಯ ಕಿಸಾನ್ ಸಂಘ, ಮತ್ತು ಭಾರತೀಯ ಮಜ್ದೂರ್ ಸಂಘ ಮುಖ್ಯವಾದವು. ಈ ಗುಂಪನ್ನು ಸಂಘ ಪರಿವಾರ ಎಂದೂ ಕರೆಯಲಾಗುತ್ತದೆ.

ಆರ್ಎಸ್ಎಸ್ ಮತ್ತು ತ್ರಿವರ್ಣ ಧ್ವಜ

ಭಾರತದ ರಾಷ್ಟ್ರಧ್ವಜವಾದ ತ್ರಿವರ್ಣ ಧ್ವಜವನ್ನು ಆರ್ಎಸ್ಎಸ್ ತನ್ನ ಶಾಖೆಗಳಲ್ಲಿ ಹಾರಿಸುತ್ತಿಲ್ಲ ಎನ್ನುವ ವಿವಾದ ಹುಟ್ಟಿಕೊಂಡಿತ್ತು. ಸಂಘದ ಶಾಖೆಗಳಲ್ಲಿ ತ್ರಿವರ್ಣ ಧ್ವಜದ ಬದಲಿಗೆ ತಮ್ಮ ಕೇಸರಿ ಧ್ವಜವನ್ನು ಹಾರಿಸಬೇಕು ಎಂದು ಹೆಡ್ಗೇವಾರ್ ಸೂಚಿಸಿದ್ದರು ಎಂದು ಹಲವರ ಹೇಳಿಕೆ ಆಧರಿಸಿ ಬಿಬಿಸಿ ವರದಿ ಮಾಡಿದೆ. 1950 ಜ.26ರ ನಂತರ ಐದು ದಶಕಗಳವರೆಗೆ ಸಂಘದ ಶಾಖೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿರಲಿಲ್ಲ ಎನ್ನುವ ವಿಚಾರ ವಿವಾದಕ್ಕೆ ಕಾರಣವಾಗಿತ್ತು. 2001ರ ಜ.26ರಂದು ನಾಗ್ಪುರದ ಆರ್ಎಸ್ಎಸ್ ಸ್ಮೃತಿಭವನಕ್ಕೆ ನುಗ್ಗಿದ ಕೆಲವರು ಬಲವಂತವಾಗಿ ತ್ರಿವರ್ಣ ಧ್ವಜ ಹಾರಿಸಲು ಪ್ರಯತ್ನಿಸಿದ್ದರು.

2002ರಿಂದ ಸಂಘದ ಶಾಖೆಗಳಲ್ಲಿ ತ್ರಿವರ್ಣಧ್ವಜವನ್ನು ಹಾರಿಸಲಾಗುತ್ತಿದೆ. ಅಲ್ಲಿಯವರೆಗೆ ಖಾಸಗಿಯವರಿಗೆ ತ್ರಿವರ್ಣ ಧ್ವಜ ಹಾರಿಸಲು ಅವಕಾಶ ಇರಲಿಲ್ಲವಾದ್ದರಿಂದ ರಾಷ್ಟ್ರಧ್ವಜ ಹಾರಿಸುತ್ತಿರಲಿಲ್ಲ ಎನ್ನುವುದ ಸಂಘದ ಸಮರ್ಥನೆ. ಸಂಘವು ರಾಷ್ಟ್ರಧ್ವಜವನ್ನು ಗೌರವಿಸುತ್ತದೆ ಎಂದು ಅದರ ಮುಖ್ಯಸ್ಥ ಮೋಹನ ಭಾಗವತ್ ಅವರು ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ.

ಸೇವಾ ಕಾರ್ಯ

ಪ್ರವಾಹ, ಭೂಕಂಪ, ಚಂಡಮಾರುತ ಸೇರಿದಂತೆ ನೈಸರ್ಗಿಕ ವಿಪತ್ತುಗಳು, ದುರ್ಘಟನೆಗಳು ನಡೆದ ಸಂದರ್ಭದಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಯಲ್ಲಿ ಆರ್ಎಸ್ಎಸ್ ಸ್ವಯಂಸೇವಕರು ಸಕ್ರಿಯವಾಗಿ ತೊಡಗಿಕೊಳ್ಳುತ್ತಾರೆ.

ಮೂರು ಬಾರಿ ನಿಷೇಧ

ಕೇಂದ್ರ ಸರ್ಕಾರವು ಸಂಘದ ಮೇಲೆ ಈವರೆಗೆ ಮೂರು ಬಾರಿ ನಿಷೇಧ ಹೇರಿದೆ. 1948ರಲ್ಲಿ ಗಾಂಧೀಜಿ ಹತ್ಯೆಯಾದ ಸಂದರ್ಭದಲ್ಲಿ, 1975ರ ತುರ್ತು ಪರಿಸ್ಥಿತಿ ವೇಳೆ ಮತ್ತು 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸದ ಬಳಿಕ ಕೇಂದ್ರ ಸರ್ಕಾರ ಆರ್ಎಸ್ಎಸ್ ಮೇಲೆ ನಿಷೇಧ ಹೇರಿತ್ತು.

ನೋಂದಾಯಿತ ಸಂಸ್ಥೆಯಲ್ಲ

ಶತಮಾನದ ಇತಿಹಾಸ ಹೊಂದಿದ್ದರೂ, ಆರ್ಎಸ್ಎಸ್ ನೋಂದಾಯಿತ ಸಂಸ್ಥೆಯಲ್ಲ. ಅದು ಲೆಕ್ಕಪತ್ರ ವಿವರಗಳನ್ನು ಸಲ್ಲಿಸುವುದಿಲ್ಲ. ಹಾಗಾಗಿ ಸಂಘಟನೆಯ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆಯ ಕೊರತೆ ಇದೆ ಎಂಬ ಟೀಕೆಗಳಿವೆ.

ಆದರೆ, ಇದಕ್ಕೆ ಪ್ರತಿಕ್ರಿಯಿಸುವ ಸಂಘದ ಮುಖಂಡರು, ಸಂಘವು ಸ್ವಯಂ ಬೆಂಬಲಿತ ಸಂಸ್ಥೆಯಾಗಿದ್ದು, ಹೊರಗಿನಿಂದ ಹಣಕಾಸಿನ ನೆರವು ಪಡೆಯುವುದಿಲ್ಲ. ಸ್ವಯಂ ಸೇವಕರಿಂದ ವರ್ಷಕ್ಕೆ ಒಂದು ಬಾರಿ ಗುರುದಕ್ಷಿಣೆ ಪಡೆಯುವ ಮೂಲಕ ಸಂಘಟನೆಯ ವೆಚ್ಚಗಳನ್ನು ಭರಿಸಲಾಗುತ್ತದೆ ಎಂಬುದು ಅವರ ಹೇಳಿಕೆ.

ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿತ್ತೇ?

ಆರ್ಎಸ್ಎಸ್ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿಲ್ಲ ಎಂಬುದು ಬಹುದೊಡ್ಡ ಆರೋಪ. ಆದರೆ, ಸಂಘವು ಇದನ್ನು ತಳ್ಳಿ ಹಾಕುತ್ತದೆ. ಅಸಹಕಾರ ಚಳವಳಿ ಸೇರಿದಂತೆ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಸಂಘ ಹಾಗೂ ಸ್ವಯಂಸೇವಕರು ಸಕ್ರಿಯವಾಗಿ ತೊಡಗಿಕೊಂಡಿದ್ದರು ಎಂಬುದು ಅದರ ವಾದ.

ಗಾಂಧೀಜಿ ಹತ್ಯೆಗಿದೆಯೇ ನಂಟು?

ಮಹಾತ್ಮ ಗಾಂಧೀಜಿ ಅವರ ಹತ್ಯೆಯಾದಾಗ ಅದರ ಹಿಂದೆ ಆರ್ಎಸ್ಎಸ್ ಇದೆ ಎಂದು ಸರ್ಕಾರ ಶಂಕಿಸಿತ್ತು. ಹಂತಕ ನಾಥೂರಾಮ್ ಗೋಡ್ಸೆ ಆರ್ಎಸ್ಎಸ್ ಸದಸ್ಯ ಎಂದೂ ಹೇಳಲಾಗಿತ್ತು. ಆದರೆ, ಗೋಡ್ಸೆ ತನ್ನ ಸದಸ್ಯನಲ್ಲ ಎಂದು ಆರ್ಎಸ್ಎಸ್ ಹೇಳಿತ್ತು. ಗಾಂಧೀಜಿಯವರ ಹತ್ಯೆಯಲ್ಲಿ ಸಂಘದ ಹೆಸರು ಎಳೆದು ತರುವುದು ಸರಿಯಲ್ಲ ಎಂದು ಹೇಳಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಆರ್ಎಸ್ಎಸ್ ಮುಖ್ಯಸ್ಥ ಗೋಲ್ವಲ್ಕರ್ ಅವರನ್ನು ಬಂಧಿಸಲಾಗಿತ್ತು.

ನ್ಯಾಯಾಲಯ ವಿಚಾರಣೆಯ ಸಂದರ್ಭದಲ್ಲಿ ಸ್ವತಃ ಗೋಡ್ಸೆಯೇ ತಾನು ಒಂದು ಕಾಲದಲ್ಲಿ ಆರ್ಎಸ್ಎಸ್ನಲ್ಲಿದ್ದೆ, ನಂತರ ಅದನ್ನು ತೊರೆದು ಹಿಂದೂ ಮಹಾಸಭಾ ಸೇರಿದ್ದೆ ಎಂದು ಹೇಳಿದ್ದ.

ಗಣವೇಷ ಬದಲು

ಬಿಳಿ ಅಂಗಿ, ಖಾಕಿ ಚಡ್ಡಿ ಆರಂಭದಿಂದಲೂ ಆರ್ಎಸ್ಎಸ್ನ ಸಮವಸ್ತ್ರ (ಗಣವೇಷ) ಆಗಿತ್ತು. ಸಂಘ ಸ್ಥಾಪನೆಯಾಗಿ 92 ವರ್ಷಗಳ ನಂತರ 2016ರಲ್ಲಿ ಈ ಸಮವಸ್ತ್ರ ಬದಲಾಯಿತು. ಈಗ ಸ್ವಯಂಸೇವಕರು ಖಾಕಿ ಚಡ್ಡಿಯ ಬದಲಿಗೆ ಖಾಕಿ ಪ್ಯಾಂಟ್ ಧರಿಸುತ್ತಾರೆ.

ಸಂಘದ ಪ್ರಾರ್ಥನಾ ಗೀತೆ ‘ನಮಸ್ತೆ ಸದಾ ವತ್ಸಲೇ ಮಾತೃಭೂಮಿ’ ಹಾಡಿಗೆ ಶತಮಾನೋತ್ಸವದ ಸಂದರ್ಭದಲ್ಲಿ ಹೊಸ ರೂಪವೂ ಸಿಕ್ಕಿದೆ.

‘ಭಾರತೀಯರೆಲ್ಲರೂ ಹಿಂದೂಗಳೇ’

ಭಾರತ ಹಿಂದೂ ರಾಷ್ಟ್ರ ಎನ್ನುವುದು ಆರ್ಎಸ್ಎಸ್ ಪ್ರತಿಪಾದನೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಹೊರಗಿನಿಂದ ಬಂದವರಾಗಿದ್ದು, ಸ್ಥಳೀಯರನ್ನು ಮತಾಂತರ ಮಾಡಿ ತಮ್ಮ ಸಂಖ್ಯೆ ಹೆಚ್ಚಿಸಿಕೊಂಡರು ಎಂದು ಸಂಘದ ಎರಡನೇ ಸರಸಂಘಚಾಲಕರಾಗಿದ್ದ ಗೋಲ್ವಲ್ಕರ್ ಅವರು ಪ್ರತಿಪಾದಿಸಿದ್ದರು. ಈ ವಿಚಾರದಲ್ಲಿ ಆರ್ಎಸ್ಎಸ್ನ ಹಾಲಿ ಸರಸಂಘಚಾಲಕರಾಗಿರುವ ಮೋಹನ ಭಾಗವತ್ ಅವರದ್ದು ಭಿನ್ನ ನಿಲುವು. ಭಾರತದಲ್ಲಿ ಇರುವವರೆಲ್ಲರೂ– ಅವರು ಯಾವುದೇ ಧರ್ಮಕ್ಕೆ ಸೇರಿದದರೂ– ಹಿಂದೂಗಳೇ ಎನ್ನುವುದು ಅವರ ಹೇಳಿಕೆ. ಯಾವ ಧರ್ಮಕ್ಕೆ ಸೇರಿದವರಾಗಿದ್ದರೂ ಭಾರತದಲ್ಲಿ ಇರುವವರೆಲ್ಲರೂ ಒಂದೇ ಮೂಲದಿಂದ ಬಂದವರು ಎನ್ನುವುದು ಅವರ ಅಭಿಪ್ರಾಯ.

ಆರ್ಎಸ್ಎಸ್ ನಡೆದುಬಂದ ಹಾದಿ

1925, ಸೆಪ್ಟೆಂಬರ್ 27 ವಿಜಯ ದಶಮಿಯ ದಿನ ಸಂಘ ಉದ್ಘಾಟನೆಯ ಘೋಷಣೆ ಮಾಡಿದ ಡಾ.ಕೇಶವ ಬಲಿರಾಮ್ ಹೆಡ್ಗೇವಾರ್. ನಾಗ್ಪುರದ ಅವರ ಮನೆಯಲ್ಲೇ ಸಂಘಟನೆ ಆರಂಭ

1926, ಏಪ್ರಿಲ್ 17 ಸಂಘಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂಬ ಹೆಸರು ಆಯ್ಕೆ. ಸಭೆಯಲ್ಲಿ ನಾಲ್ಕು ಹೆಸರುಗಳ ಪ್ರಸ್ತಾಪ. ಅವುಗಳಲ್ಲಿ ಒಂದು ಆಯ್ಕೆ. ಜರಿಪಟ್ಕಾ ಮಂಡಲ, ಭಾರತ ಉದ್ಧಾರಕ ಮಂಡಲ, ಹಿಂದೂ ಸ್ವಯಂಸೇವಕ ಸಂಘ ಪ್ರಸ್ತಾಪವಾದ ಇನ್ನುಳಿದ ಹೆಸರುಗಳು. ಇದೇ ವರ್ಷದ ಮೇ 28ರಿಂದ ನಾಗ್ಪುರದಲ್ಲಿ ನಿತ್ಯ ಶಾಖೆಗಳ ಆರಂಭ

1929, ನವೆಂಬರ್ 9, 10 ಹೆಡ್ಗೇವಾರ್ ಅವರನ್ನು ಸಂಘದ ಮುಖ್ಯಸ್ಥ (ಸರಸಂಘಚಾಲಕ) ಮತ್ತು ಬಾಲಾಜಿ ಹುದ್ದಾರ್ ಅವರನ್ನು ಪ್ರಧಾನ ಕಾರ್ಯದರ್ಶಿ (ಸರಕಾರ್ಯವಾಹ) ಮತ್ತು ಮಾರ್ತಾಂಡರಾವ್ ಜೋಗ್ ಅವರನ್ನು ಮುಖ್ಯ ತರಬೇತುದಾರರಾಗಿ (ಸರಸೇನಾಪತಿ) ನಿಯೋಜನೆ

1940 ಪುಣೆಯಲ್ಲಿ ನಡೆದ ಪ್ರಾಂತ್ಯ ಬೈಠಕ್ಗೆ ವೀರ ಸಾವರ್ಕರ್ ಭೇಟಿ. ಅದೇ ವರ್ಷ ಬ್ರಿಟಿಷ್ ಸರ್ಕಾರದಿಂದ ಸಂಘದ ಸಮವಸ್ತ್ರ –ಗಣವೇಷ ಮತ್ತು ಪಥಸಂಚಲನದ ಮೇಲೆ ನಿಷೇಧ

1940ರ ಜೂನ್ 20 ಅನಾರೋಗ್ಯದಿಂದ ಬಳಲುತ್ತಿದ್ದ ಹೆಡ್ಗೇವಾರ್ ಅವರನ್ನು ಭೇಟಿ ಮಾಡಿದ ಸುಭಾಷ್ ಚಂದ್ರ ಬೋಸ್. ಮರು ದಿನ (ಜೂನ್ 21) ಆರ್ಎಸ್ಎಸ್ ಸಂಸ್ಥಾಪಕ ನಿಧನ

1940, ಜುಲೈ 3 ಮಾಧವ ಸದಾಶಿವ ಗೋಲ್ವಲ್ಕರ್ ಅವರು ಮುಖ್ಯಸ್ಥರಾಗಿ ನೇಮಕ

1947, ಸೆ.15 ದೆಹಲಿಯ ಭಂಗಿ ಕಾಲೊನಿಯಲ್ಲಿ 500 ಸ್ವಯಂ ಸೇವಕರನ್ನು ಉದ್ದೇಶಿಸಿ ಮಹಾತ್ಮ ಗಾಂಧೀಜಿ ಭಾಷಣ. ಇದೇ ವರ್ಷ ಆರ್ಗನೈಸರ್ ಮತ್ತು ಪಾಂಚಜನ್ಯ ವಾರಪತ್ರಿಕೆಗಳ ಆರಂಭ

1948, ಜನವರಿ 30 ಗಾಂಧೀಜಿಯವರ ಹತ್ಯೆ. ಮರುದಿನ ಅಂದರೆ ಫೆ.1ರಂದು ಗೋಲ್ವಲ್ಕರ್ ಬಂಧನ. ಸಂಘದ ಮೇಲೆ ನಿಷೇಧ ಹೇರಿದ ಮಧ್ಯಂತರ ಸರ್ಕಾರ. ಫೆ.4ರಂದು 17 ಸಾವಿರದಷ್ಟು ಸ್ವಯಂ ಸೇವಕರ ಬಂಧನ. ಫೆ.5ರಂದು ಸಂಘದ ಶಾಖೆಗಳನ್ನು ಮುಚ್ಚುವ ಘೋಷಣೆ

1949 ಸಂಘದ ಸಂವಿಧಾನ ಕರಡು ಸಿದ್ಧ

1949, ಜುಲೈ 12 ಸರ್ಕಾರದಿಂದ ಸಂಘದ ಮೇಲಿನ ನಿಷೇಧ ವಾಪಸ್. ಮರುದಿನ ಜೈಲಿನಿಂದ ಗೋಲ್ವಲ್ಕರ್ ಬಿಡುಗಡೆ. ಅದೇ ವರ್ಷ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ಗೆ (ಎಬಿವಿಪಿ) ಚಾಲನೆ

1951 ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರಿಂದ ಭಾರತೀಯ ಜನ ಸಂಘ ಸ್ಥಾಪನೆ

1952 ದೇಶದಲ್ಲಿ ಗೋ ಹತ್ಯೆ ನಿಷೇಧಕ್ಕೆ ಆಗ್ರಹಿಸಿ ಗೋರಕ್ಷಾ ಆಂದೋಲನ ಆರಂಭ

1963 ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲು ಆರ್ಎಸ್ಎಸ್ಗೆ ಆಹ್ವಾನ. 3,000 ಸ್ವಯಂಸೇವಕರು ಭಾಗಿ

1964 ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಸ್ಥಾಪನೆ

1973, ಜೂನ್ 6 ಸಂಘದ ಮುಖ್ಯಸ್ಥ ಗೋಲ್ವಲ್ಕರ್ ನಿಧನ. ಮಧುಕರ ದತ್ತಾತ್ರೇಯ ದೇವರಸ್–ಬಾಳಾ ಸಾಹೇಬ್ ಅವರು 3ನೇ ಸರಸಂಘ ಚಾಲಕರಾಗಿ ನೇಮಕ

1975, ಜೂನ್ 25 ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ

1975, ಜುಲೈ 4 ಎರಡನೇ ಬಾರಿಗೆ ಆರ್ಎಸ್ಎಸ್ಗೆ ನಿಷೇಧ

1977 ಹೊಸದಾಗಿ ಸ್ಥಾಪನೆಯಾದ ಜನತಾ ಪಕ್ಷದೊಂದಿಗೆ ಭಾರತೀಯ ಜನ ಸಂಘ ವಿಲೀನ

1977, ಮಾರ್ಚ್ 22 ಸಂಘದ ಮೇಲಿನ ನಿಷೇಧ ಹಿಂಪಡೆದ ಸರ್ಕಾರ

1977, ನವೆಂಬರ್ 3 ಪಟ್ನಾದಲ್ಲಿ ಆರ್ಎಸ್ಎಸ್ ಸಭೆಯನ್ನು ಉದ್ದೇಶಿಸಿ ಜಯಪ್ರಕಾಶ ನಾರಾಯಣ ಭಾಷಣ

1980 95 ಸಾವಿರ ಗ್ರಾಮಗಳು ಮತ್ತು 1 ಕೋಟಿ ಕುಟುಂಬಗಳನ್ನು ಸಂಪರ್ಕಿಸುವ ಜನ ಸಂಪರ್ಕ ಅಭಿಯಾನ ಆರಂಭ

1989 ಪಂಜಾಬ್ನ ಮೊಗಾ ಪಟ್ಟಣದಲ್ಲಿ ಆರ್ಎಸ್ಎಸ್ ಶಾಖೆಯ ಮೇಲೆ ಶಂಕಿತ ಖಾಲಿಸ್ತಾನಿ ಉಗ್ರರಿಂದ ದಾಳಿ 18 ಸ್ವಯಂ ಸೇವಕರು ಹಾಗೂ ಇತರ ಆರು ಮಂದಿ ಸಾವು

1992, ಡಿಸೆಂಬರ್ 6 ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ

1992, ಡಿಸೆಂಬರ್ 10 ಸಂಘದ ಮೇಲೆ ಮತ್ತೆ ನಿಷೇಧ ಹೇರಿದ ಸರ್ಕಾರ

1993, ಜೂನ್ 4 ನಿಷೇಧ ವಾಪಸ್

1994 ,ಮಾರ್ಚ್ 11 ಪ್ರೊ.ರಾಜೇಂದ್ರ ಸಿಂಗ್– ರಾಜು ಬೈಯ್ಯಾ ಅವರು ನಾಲ್ಕನೇ ಸರಸಂಘ ಚಾಲಕರಾಗಿ ನೇಮಕ

2000 ಆರ್ಎಸ್ಎಸ್ನ ಐದನೇ ಮುಖ್ಯಸ್ಥರಾಗಿ ಕೆ.ಎಸ್.ಸುದರ್ಶನ್ ಆಯ್ಕೆ

2009 ಸಂಘದ ಆರನೇ ಸರ ಸಂಘಚಾಲಕರಾಗಿ ಮೋಹನ್ ಭಾಗವತ್ ಅವರ ಹೆಸರನ್ನು ಘೋಷಿಸಿದ ಸುದರ್ಶನ್

ಆಧಾರ: ಆರ್ಎಸ್ಎಸ್ ವೆಬ್ಸೈಟ್, ಬಿಬಿಸಿ, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.