ಗುರುವಾರ , ನವೆಂಬರ್ 14, 2019
26 °C

26 ಬ್ಯಾಂಕ್‌ಗಳ 3,427 ಶಾಖೆಗಳ ವಿಲೀನ

Published:
Updated:

ಇಂದೋರ್ : ಐದು ವರ್ಷಗಳಲ್ಲಿ ಸರ್ಕಾರಿ ಸ್ವಾಮ್ಯದ 26 ಬ್ಯಾಂಕ್‌ಗಳ 3,427 ಶಾಖೆಗಳನ್ನು ಮುಚ್ಚಲಾಗಿದೆ ಅಥವಾ ವಿಲೀನಗೊಳಿಸಲಾಗಿದೆ.

ಇವುಗಳಲ್ಲಿ 2,568 (ಶೇ 75 ರಷ್ಟು) ಶಾಖೆಗಳು ಎಸ್‌ಬಿಐಗೆ ಸೇರಿದ್ದಾಗಿವೆ.

ಬ್ಯಾಂಕ್‌ಗಳ ವಿಲೀನ ನಿರ್ಧಾರದಿಂದ ಹೀಗಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಸಲ್ಲಿಸಿದ್ದ ಅರ್ಜಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಾಹಿತಿ ನೀಡಿದೆ.

ಮಧ್ಯಪ್ರದೇಶದ ನೀಮುಚ್ ನಗರದ ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌಡ್ ಅವರು ಆರ್‌ಬಿಐ ಅರ್ಜಿ ಸಲ್ಲಿಸಿದ್ದರು.

 

ಪ್ರತಿಕ್ರಿಯಿಸಿ (+)