ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಸಾಲ ನಿಧಿ: ಎಂಎಸ್‌ಎಂಇಗೆ ₹16,031 ಕೋಟಿ ವಿತರಣೆ

Last Updated 16 ಜೂನ್ 2020, 11:44 IST
ಅಕ್ಷರ ಗಾತ್ರ

ನವದೆಹಲಿ: ತುರ್ತು ಸಾಲ ಖಾತರಿ ಯೋಜನೆಯಡಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು‌ (ಪಿಎಸ್‌ಬಿ) ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ (ಎಂಎಸ್‌ಎಂಇ) ₹16,032 ಕೋಟಿ ಸಾಲ ವಿತರಿಸಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

‘ಕೋವಿಡ್‌–19’ನಿಂದಸಂಕಷ್ಟಕ್ಕೆ ಸಿಲುಕಿರುವ ಉದ್ಯಮಗಳಿಗೆ ನೆರವಾಗಲುಶೇ 100ರಷ್ಟು ಸಾಲ ಖಾತರಿ ಯೋಜನೆಯಡಿ ಬ್ಯಾಂಕ್‌ಗಳು ಒಟ್ಟಾರೆಯಾಗಿ ₹ 32,050 ಕೋಟಿ ಮಂಜೂರು ಮಾಡಿವೆ.

ಆತ್ನನಿರ್ಭರ ಭಾರತ ಅಭಿಯಾನ ಪ್ಯಾಕೇಜ್‌ನಲ್ಲಿ ₹ 20.97 ಲಕ್ಷ ಕೋಟಿ ಮೊತ್ತದ ಆರ್ಥಿಕ ಕೊಡುಗೆಯನ್ನು ಸರ್ಕಾರ ಘೋಷಿಸಿದೆ. ಇದರ ಭಾಗವಾಗಿ ಬ್ಯಾಂಕ್‌ಗಳು ಸಾಲ ವಿತರಣೆ ಮಾಡಲು ಆರಂಭಿಸಿವೆ.

ಹಣಕಾಸು ಸಂಸ್ಥೆಗಳ ಸಾಲ ನೀಡಿಕೆ ಸಾಮರ್ಥ್ಯ ವೃದ್ಧಿಸಲು ಹಾಗೂ ಎಂಎಸ್‌ಎಂಇಗಳ ಚೇತರಿಕೆಗೆ ಅಗತ್ಯ ನೆರವು ನೀಡಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಎಸ್‌ಬಿಐ

ಈ ಯೋಜನೆಯಡಿ 1.5 ಲಕ್ಷ ಎಂಎಸ್‌ಎಂಇಗಳಿಗೆ ₹ 15 ಸಾವಿರ ಕೋಟಿ ಮಂಜೂರು ಮಾಡಿದ್ದು, ಇದುವರೆಗೆ ₹ 8,700 ಕೋಟಿ ವಿತರಿಸಲಾಗಿದೆ ಎಂದುಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಪ್ರಕಟಣೆಯಲ್ಲಿ ತಿಳಿಸಿದೆ.

ಎಂಎಸ್‌ಎಂಇಗಳಿಗೆ ತುರ್ತು ಸಾಲ ಸೌಲಭ್ಯವಲ್ಲದೆ, ದುಡಿಯುವ ಬಂಡವಾಳದ ಮಿತಿಯ ಮರು ಪರಿಶೀಲನೆ ಹಾಗೂ ಮುಂಗಡದಲ್ಲಿ ಮರುಹೊಂದಾಣಿಕೆ ಸೌಲಭ್ಯಗಳನ್ನೂ ಪರಿಗಣಿಸಲಾಗುತ್ತಿದೆ ಎಂದು ತಿಳಿಸಿದೆ.

ಎಂಎಸ್‌ಎಂಇಗಳನ್ನು ತಲುಪಲು ಬ್ಯಾಂಕ್‌ನ ವೃತ್ತ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಲಭ್ಯವಿರುವ ಹಣಕಾಸು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT