ನವದೆಹಲಿ: ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹4,904 ಕೋಟಿ ನಿವ್ವಳ ಲಾಭ ಗಳಿಸಿದೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹4,303 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣ ಶೇ 14ರಷ್ಟು ಹೆಚ್ಚಳವಾಗಿದೆ ಎಂದು ಬ್ಯಾಂಕ್ ಷೇರುಪೇಟೆಗೆ ಶನಿವಾರ ತಿಳಿಸಿದೆ.

ಒಟ್ಟು ವರಮಾನದಲ್ಲಿ ಶೇ 5ರಷ್ಟು ಏರಿಕೆಯಾಗಿದ್ದು, ₹36,214 ಕೋಟಿಯಾಗಿದೆ. ಬ್ಯಾಂಕ್ನ ನಿವ್ವಳ ಬಡ್ಡಿ ವರಮಾನ ₹21,047 ಕೋಟಿಯಾಗಿದೆ.

ಒಟ್ಟು ವಸೂಲಾಗದ ಸಾಲದ ಪ್ರಮಾಣ (ಜಿಎನ್ಪಿಎ) ಶೇ 4.48ರಿಂದ ಶೇ 3.45ಕ್ಕೆ ಇಳಿದಿದೆ. ನಿವ್ವಳ ಎನ್ಪಿಎ ಶೇ 0.46ರಿಂದ ಶೇ 0.36ಕ್ಕೆ ಇಳಿದಿದೆ. ಬ್ಯಾಂಕ್ನ ಉಳಿತಾಯ ಖಾತೆಗಳಲ್ಲಿನ ಠೇವಣಿ ಶೇ 4ರಷ್ಟು ಏರಿಕೆಯಾಗಿದ್ದು, ₹5.08 ಲಕ್ಷ ಕೋಟಿಯಷ್ಟಾಗಿದೆ ಎಂದು ತಿಳಿಸಿದೆ.
.ಯೆಸ್ ಬ್ಯಾಂಕ್ ಲಾಭ ಶೇ 18ರಷ್ಟು ಹೆಚ್ಚಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.