ಶನಿವಾರ, ಅಕ್ಟೋಬರ್ 1, 2022
20 °C

ಗಾಲಿಕುರ್ಚಿಯಲ್ಲಿ ಡ್ಯಾನ್ಸ್‌: ಜುಂಝನ್‌ವಾಲಾ ಜೀವನೋತ್ಸಾಕ್ಕೆ ನೆಟ್ಟಿಗರ ಮೆಚ್ಚುಗೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಭಾರತದ ಉದ್ಯಮಿ, ಆಕಾಸಾ ಏರ್ ಕಂಪನಿಯ ಸ್ಥಾಪಕ ರಾಕೇಶ್ ಜುಂಝನ್‌ವಾಲಾ ಅವರ ಜೀವನೋತ್ಸಾಹದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.

ಅವರು ಗಾಲಿಕುರ್ಚಿಯಲ್ಲಿ ಕುಳಿತು, ಕುಟುಂಬದ ಸದಸ್ಯರ ಜೊತೆಗೆ ಡ್ಯಾನ್ಸ್‌ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಡಯಾಬಿಟಿಸ್‌ನಿಂದ ಬಳಲುತ್ತಿದ್ದ ಅವರಿಗೆ ಗಾಲಿಕುರ್ಚಿ ಕಾಯಂ ಆಗಿತ್ತು. ಆನಾರೋಗ್ಯದ ನಡುವೆಯೂ ಅವರ ಜೀವನೋತ್ಸಾಹ ಮತ್ತು ಉದ್ಯಮೋತ್ಸಾಹಕ್ಕೆ ಯಾವುದೇ ತಡೆ ಇರಲಿಲ್ಲ. ಅವರು ನಿಧನರಾಗುವುದಕ್ಕೂ ಎರಡು ವಾರಗಳ ಹಿಂದೆ ಅವರು ಸ್ಥಾಪನೆ ಮಾಡಿದ್ದ ಆಕಾಸಾ ಏರ್ ಕಂಪನಿಯ ವಿಮಾನಗಳು ಹಾರಾಟ ಆರಂಭಿಸಿದ್ದವು. 

ಪಕ್ಕಾ ಫ್ಯಾಮಿಲಿ ಮ್ಯಾನ್‌ ಆಗಿದ್ದ ಅವರು ಕುಟುಂಬದವರ ಜೊತೆ ಸಾಕಷ್ಟು ಸಮಯ ಕಳೆಯುತ್ತಿದ್ದರು. ಅವರ ಕುಟುಂಬಕ್ಕೆ ಆಪ್ತರಾಗಿದ್ದ ಕೇಶವ್‌ ಅರೋರಾ ಎಂಬವರು ವಿಡಿಯೊವೊಂದನ್ನು ಟ್ವೀಟ್‌ ಮಾಡಿದ್ದು, ಅದರಲ್ಲಿ ರಾಕೇಶ್‌ ಗಾಲಿಕುರ್ಚಿಯಲ್ಲಿ ಕುಳಿತುಕೊಂಡ ಹಿಂದೆ ಹಾಡಿಗೆ ಡ್ಯಾನ್ಸ್‌ ಮಾಡಿದ್ದರು. ಅವರ ಜೊತೆಗೆ ಕುಟುಂಬದವರು ಕೂಡ ಹೆಜ್ಜೆ ಹಾಕಿದ್ದರು.

ಓದಿ... ಭಾರತದ ಕೋಟ್ಯಧಿಪತಿ, ಆಕಾಶ್‌ ಏರ್‌ ಸ್ಥಾಪಕ ರಾಕೇಶ್‌ ಜುಂಝನ್‌ವಾಲಾ ನಿಧನ

ಈ ವಿಡಿಯೊಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಅವರ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಪಕ್ಕಾ ಫ್ಯಾಮಿಲಿ ಮ್ಯಾನ್‌ ಆಗಿರುವ ಅವರ ಜೀವನೋತ್ಸಾಹ ಈ ಪೀಳಿಗೆಗೆ ಮಾದರಿಯಾಗಿದೆ ಕಾಮೆಂಟ್‌ ಮಾಡುತ್ತಿದ್ದಾರೆ. 

ರಾಕೇಶ್ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ 6:30ಕ್ಕೆ ಕೊನೆಯುಸಿರೆಳೆದಿದ್ದಾರೆ. 

ಓದಿ...ಉದ್ಯಮಿ ರಾಕೇಶ್‌ ಜುಂಝನ್‌ವಾಲಾ ನಿಧನ: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಸಂತಾಪ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು