ಮಂಗಳವಾರ, ಮೇ 24, 2022
29 °C

ರ್‍ಯಾಮ್ಕೊ ಸಿಮೆಂಟ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರ್‍ಯಾಮ್ಕೊ ಸಿಮೆಂಟ್ಸ್ ಲಿಮಿಟೆಡ್‌ ಕಂಪನಿಯ ಅಲತಿಯೂರ್ ಘಟಕವು ಪರಿಸರ ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳಿಗೆ ಸಿಐಐ – ಎಸ್‌ಆರ್‌ ಇಎಚ್‌ಎಸ್‌ ಶ್ರೇಷ್ಠತಾ ಪ್ರಶಸ್ತಿಗಳ ಸಾಲಿನಲ್ಲಿ 2021ನೆಯ ಸಾಲಿನ ಸ್ವರ್ಣ ಪ್ರಶಸ್ತಿಗೆ ಪಾತ್ರವಾಗಿದೆ.

ಮಾರ್ಚ್‌ ಕೊನೆಯ ವಾರದಲ್ಲಿ ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಕಂ‍ಪನಿಯ ಪ್ರಕಟಣೆ ತಿಳಿಸಿದೆ. ಪ್ರಶಸ್ತಿಗೆ ಒಟ್ಟು 194 ಕೈಗಾರಿಕೆಗಳ ನಡುವೆ ಸ್ಪರ್ಧೆ ಇತ್ತು. ಸಿಐಐ–ಎಸ್‌ಆರ್‌ನ ಮಾಜಿ ಅಧ್ಯಕ್ಷ ಟಿ.ಟಿ. ಅಶೋಕ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ನೀರಿನ ಉತ್ತಮ ನಿರ್ವಹಣೆಗಾಗಿ ಘಟಕವು ಇಎಚ್‌ಎಸ್‌ ವಿಭಾಗದ ವಿಶೇಷ ಪ್ರಶಸ್ತಿಯನ್ನು ಕೂಡ ತನ್ನದಾಗಿಸಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು