ನವದೆಹಲಿ: ಬೈಕ್ ಟ್ಯಾಕ್ಸಿ ಸೇವೆಗೆ ಜನಪ್ರಿಯ ಆಗಿರುವ ರ್‍ಯಾಪಿಡೊ ಕಂಪನಿಯು ಕ್ಯಾಬ್ ಸೇವೆಗೆ ಆರಂಭಿಸಿರುವುದಾಗಿ ಮಂಗಳವಾರ ಘೋಷಿಸಿದೆ. ಬೆಂಗಳೂರು, ಹೈದರಾಬಾದ್, ದೆಹಲಿ–ಎನ್‌ಸಿಆರ್‌ನಲ್ಲಿ 1.2 ಲಕ್ಷ ಕ್ಯಾಬ್‌ಗಳೊಂದಿಗೆ ಸೇವೆ ಆರಂಭಿಸಿದ್ದು, 2024ರ ಸೆಪ್ಟೆಂಬರ್ ವೇಳೆಗೆ 35 ನಗರಗಳಿಗೆ ಸೇವೆಯನ್ನು ವಿಸ್ತರಿಸುವ ಯೋಜನೆ ಹೊಂದಿರುವುದಾಗಿ ಕಂಪನಿಯ ಸಂಸ್ಥಾಪಕ ಪವನ್ ಗುಂತುಪಲ್ಲಿ ತಿಳಿಸಿದ್ದಾರೆ.