ಭಾನುವಾರ, ಸೆಪ್ಟೆಂಬರ್ 27, 2020
24 °C

ಸತತ ನಾಲ್ಕನೇ ಬಾರಿ ರೆಪೊ ದರ ಇಳಿಸಿದ ಆರ್‌ಬಿಐ; ಅಗ್ಗವಾಗಲಿದೆ ಇಎಂಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೊ ದರವನ್ನು (ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) ಬುಧವಾರ ಶೇ 5.40 ರಷ್ಟು ಇಳಿಕೆ ಮಾಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸತತ ನಾಲ್ಕನೇ ಬಾರಿಗೆ ಆರ್‌ಬಿಐ ರೆಪೊ ದರವನ್ನು ಇಳಿಸಿದೆ.

ಜೂನ್ ಮೊದಲ ವಾರದಲ್ಲಿ ರೆಪೊ ದರ ಶೇ. 5.75 ಆಗಿತ್ತು. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಧ್ಯಕ್ಷರಾಗಿರುವ ಆರು ಸದಸ್ಯರ ಹಣಕಾಸು ನೀತಿ ಸಮಿತಿ ರೆಪೊ ದರ ಇಳಿಕೆ ಮಾಡುವ ಈ ತೀರ್ಮಾನ ಕೈಗೊಂಡಿತ್ತು.

ಒಂಭತ್ತು ವರ್ಷಗಳ ಕಾಲಾವಧಿಯಲ್ಲಿ ಅತೀ ಕಡಿಮೆ ರೆಪೊ ದರ ಇದಾಗಿದೆ.

ಸಮಿತಿಯಲ್ಲಿರುವ ನಾಲ್ವರು ಸದಸ್ಯರು ರೆಪೊ ದರವನ್ನು 0.35% ಇಳಿಕೆ ಮಾಡುವುದರ ಬಗ್ಗೆ  ಅಭಿಪ್ರಾಯ ವ್ಯಕ್ತ ಪಡಿಸಿದ್ದು,ಇಬ್ಬರು ಸದಸ್ಯರು 0.25% ಇಳಿಕೆ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರು.

ರೆಪೊ ದರ ಇಳಿಕೆಯಾಗಿದ್ದರಿಂದ ಇಎಂಐ ಮತ್ತು ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು