ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕೇಂದ್ರ ಸರಕಾರಕ್ಕೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ದಾಖಲೆಯ ₹2.69 ಲಕ್ಷ ಕೋಟಿ ಲಾಭಾಂಶ ಘೋಷಿಸಿದೆ.

2023–24ನೇ ಸಾಲಿಗೆ ಹೋಲಿಸಿದಲ್ಲಿ ಇದು ಶೇ 27.4ರಷ್ಟು ಹೆಚ್ಚಳವಾಗಿದೆ. ಭಾರತದ ಉತ್ಪನ್ನಗಳಿಗೆ ಅಮೆರಿಕದ ಹೆಚ್ಚುವರಿ ಸುಂಕ ಮತ್ತು ಪಾಕಿಸ್ತಾನದೊಂದಿಗಿನ ಸೇನಾ ಸಂಘರ್ಷದಿಂದ ಉಂಟಾಗಿರುವ ವೆಚ್ಚವನ್ನು ಸರಿದೂಗಿಸಲು ಇದು ನೆರವಾಗಲಿದೆ ಎಂದು ಅಂದಾಜಿಸಲಾಗಿದೆ.

ಶುಕ್ರವಾರ ನಡೆದ ಆರ್ಬಿಐನ 616ನೇ ಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಲಾಭಾಂಶ ನೀಡುವ ಕುರಿತು ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ ಕೇಂದ್ರ ಬ್ಯಾಂಕ್ನ ನಿರ್ದೇಶಕರು ನಿರ್ಧರಿಸಿದರು. 2023–24ರಲ್ಲಿ ₹2.1 ಲಕ್ಷ ಕೋಟಿ ಲಾಭಾಂಶವನ್ನು ಸರ್ಕಾರಕ್ಕೆ ಆರ್ಬಿಐ ನೀಡಿತ್ತು. 2022–23ರಲ್ಲಿ ₹87,416 ಕೋಟಿ ಲಾಭಾಂಶ ನೀಡಲಾಗಿತ್ತು.

ತುರ್ತು ನಿಧಿ ಪ್ರಮಾಣ ಹೆಚ್ಚಳ

ಆರ್ಬಿಐ ಗವರ್ನರ್ ಆಗಿದ್ದ ಬಿಮಲ್ ಜಲನ್ ಅಧ್ಯಕ್ಷತೆಯ ಪರಿಣತರ ಸಮಿತಿ ನೀಡಿರುವ ಶಿಫಾರಸ್ಸಿನ ಅನ್ವಯ 2019ರಿಂದ ಆರ್ಥಿಕ ಬಂಡವಾಳದ ಚೌಕಟ್ಟನ್ನು (ಇಸಿಎಫ್) ಅಳವಡಿಸಿಕೊಳ್ಳಲಾಗಿದೆ. ಇದರ ಆಧಾರದ ಮೇಲೆ ಕೇಂದ್ರಕ್ಕೆ ಲಾಭಾಂಶ ಪಾವತಿಸಲಾಗುತ್ತದೆ. ಮಾರ್ಚ್ನಲ್ಲಿ ನಡೆದ ಸಭೆಯಲ್ಲಿ ಪರಿಷ್ಕೃತ ಆರ್ಥಿಕ ಬಂಡವಾಳದ ಚೌಕಟ್ಟಿಗೆ ಕೇಂದ್ರೀಯ ಮಂಡಳಿ ಸಭೆಯು ಅನುಮೋದನೆ ನೀಡಿತ್ತು. ಇದರ ಅನ್ವಯ ಸರ್ಕಾರಕ್ಕೆ ಲಾಭಾಂಶ ಪಾವತಿಸಲು ಕ್ರಮವಹಿಸಲಾಗಿದೆ ಎಂದು ಆರ್ಬಿಐ ತಿಳಿಸಿದೆ. ಅರ್ಥ ವ್ಯವಸ್ಥೆಗೆ ಎದುರಾಗಬಹುದಾದ ಅಪಾಯ ಎದುರಿಸಲು ಆರ್ಬಿಐ ತೆಗೆದಿರಿಸುವ ತುರ್ತು ನಿಧಿಯ ಪ್ರಮಾಣವನ್ನು (ಸಿಆರ್ಬಿ) ಶೇ 4.50ರಿಂದ ಶೇ 7.50ರ ಮಿತಿಯಲ್ಲಿ ಕಾಯ್ದುಕೊಳ್ಳಬೇಕು ಎಂದು ಪರಿಷ್ಕೃತ ನಿಯಮಾವಳಿಯಲ್ಲಿ ಹೇಳಲಾಗಿದೆ. ಅಂದರೆ ಆರ್ಬಿಐನ ಬ್ಯಾಲೆನ್ಸ್ ಶೀಟ್ಗೆ ಅನುಗುಣವಾಗಿ ಅನಿರೀಕ್ಷಿತ ಹಣಕಾಸು ಪರಿಸ್ಥಿತಿ ಎದುರಿಸಲು ಇರುವ ತುರ್ತು ನಿಧಿಯ ಪ್ರಮಾಣ ಇದಾಗಿದೆ. ಇದರನ್ವಯ 2025–26ರಲ್ಲಿ ಸಿಆರ್ಬಿ ಉದ್ದೇಶಕ್ಕೆ ಮೀಸಲಿಡುವ ಮೊತ್ತವನ್ನು ಶೇ 7.50ಕ್ಕೆ ನಿಗದಿಪಡಿಸಲು ಮಂಡಳಿಯು ಸಮ್ಮತಿಸಿದೆ. 2024–25ರಲ್ಲಿ ಶೇ 6.5ಕ್ಕೆ ನಿಗದಿಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.