ಶನಿವಾರ, ಅಕ್ಟೋಬರ್ 19, 2019
22 °C

ಬಡ್ಡಿದರ ಕಡಿತಕ್ಕೆ ಅವಕಾಶ ಇದೆ: ಶಕ್ತಿಕಾಂತ್‌ ದಾಸ್‌

Published:
Updated:

ಮುಂಬೈ: ‘ಬಡ್ಡಿದರದಲ್ಲಿ ಇಳಿಕೆ ಮಾಡಲು ಅವಕಾಶ ಇದೆ’ ಎಂದು ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ತಿಳಿಸಿದ್ದಾರೆ.

ಹಣದುಬ್ಬರ ಶೇ 4ಕ್ಕಿಂತಲೂ ಕೆಳಮಟ್ಟದಲ್ಲಿದೆ. ಮುಂದಿನ ಒಂದು ವರ್ಷದಲ್ಲಿಯೂ ಮುಂದುವರಿಯುವ ನಿರೀಕ್ಷೆ ಇದೆ. ಬೆಲೆಯಲ್ಲಿಯೂ ಸ್ಥಿರತೆ ಇದೆ. ಆರ್ಥಿಕ ಪ್ರಗತಿ ಮಂದಗತಿಯಲ್ಲಿ ಇರುವಂತಹ ಸ್ಥಿತಿಯಲ್ಲಿ ಬಡ್ಡಿದರ ಕಡಿತಕ್ಕೆ ಅವಕಾಶ ಇದೆ ಎಂದಿದ್ದಾರೆ.

ಬ್ಲೂಮ್‌ಬರ್ಗ್‌ ಭಾರತ ಆರ್ಥಿಕ ಶೃಂಗದಲ್ಲಿ ಮಾತನಾಡಿದ ಅವರು, ‘ಸೌದಿ ಅರೇಬಿಯಾದ ತೈಲ ಬಿಕ್ಕಟ್ಟು ಭಾರತದ ಹಣದುಬ್ಬರದ ಮೇಲೆ ಹೆಚ್ಚಿನ ಪರಿಣಾಮಬಿರುವುದಿಲ್ಲ’ ಎಂದು ಹೇಳಿದ್ದಾರೆ.

Post Comments (+)