ಸತತ 5ನೇ ಬಾರಿಗೆ ರೆಪೊ ದರ ಇಳಿಕೆ ಮಾಡಿದ ರಿಸರ್ವ್ ಬ್ಯಾಂಕ್

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು (ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) ಶುಕ್ರವಾರ ಶೇ 5.15 ರಷ್ಟು ಇಳಿಕೆ ಮಾಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸತತ 5ನೇ ಬಾರಿಗೆ ಆರ್‌ಬಿಐ ರೆಪೊ ದರವನ್ನು ಇಳಿಸಿದೆ.
ಕಳೆದ ಒಂಬತ್ತು ವರ್ಷಗಳ ಕಾಲಾವಧಿಯಲ್ಲಿ ಅತೀ ಕಡಿಮೆ ರೆಪೊ ದರ ಇದಾಗಿದೆ. ದೇಶದ ಆರ್ಥಿಕತೆಗೆ ಬಲ ತುಂಬುವ ನಿಟ್ಟಿನಲ್ಲಿ ಮತ್ತೆ ರೆಪೊ ದರವನ್ನು ಇಳಿಕೆ ಮಾಡಲಾಗಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಧ್ಯಕ್ಷರಾಗಿರುವ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು(ಎಂಪಿಸಿ) ಶುಕ್ರವಾರ ಸಭೆ ನಡೆಸಿ ರೆಪೊ ದರ ಕಡಿಮೆ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿತು.
ಹಣದುಬ್ಬರವು ಆರ್‌ಬಿಐ ನಿಗದಿಪಡಿಸಿರುವ ಹಿತಕರ ಮಟ್ಟದಲ್ಲಿ (ಶೇ 4) ಇರುವುದು ಹಾಗೂ ನಿಧಾನಗೊಂಡಿರುವ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಒತ್ತಡವು ಹೆಚ್ಚಿರುವುದರಿಂದ ಕೇಂದ್ರೀಯ ಬ್ಯಾಂಕ್ ರೆಪೊ ದರ ಕಡಿತಗೊಳಿಸಲಾಗಿದೆ.
ಸಮಿತಿಯಲ್ಲಿರುವ ನಾಲ್ವರು ಸದಸ್ಯರು ರೆಪೊ ದರವನ್ನು 0.35% ಇಳಿಕೆ ಮಾಡುವುದರ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದು,ಇಬ್ಬರು ಸದಸ್ಯರು 0.25% ಇಳಿಕೆ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರು.
ಸಂಕಷ್ಟು ಎದುರಿಸುತ್ತಿರುವ ಉತ್ಪಾದನಾ ವಲಯ ಹಾಗೂ ವಾಹನ ಉದ್ಯಮಕ್ಕೆ ರೆಪೊ ದರ ಇಳಿಕೆಯಿಂದ ಅನುಕೂಲವಾಗಲಿದೆ. ಹಾಗೂ ಗೃಹ ಮತ್ತು ವಾಹನ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.