ಬುಧವಾರ, ಏಪ್ರಿಲ್ 1, 2020
19 °C

ನಿರ್ದೇಶಕ ಮಂಡಳಿಯ ಕಲಾಪ ಬಹಿರಂಗಕ್ಕೆ ಆರ್‌ಬಿಐ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ತನ್ನ ನಿರ್ದೇಶಕ ಮಂಡಳಿಯ ಸಭೆಯ ಕಲಾಪಗಳ ವಿವರಗಳನ್ನು ಬಹಿರಂಗಪಡಿಸಲು ಭಾರತೀಯ ರಿಸರ್ವ್‌ ಬ್ಯಾಂಕ್ ನಿರ್ಧರಿಸಿದೆ.

ಕೇಂದ್ರೀಯ ಬ್ಯಾಂಕ್‌ನ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಮತ್ತು ಸಭೆಯಲ್ಲಿ ಚರ್ಚಿಸಲಾದ ಸಂಗತಿಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ವಿವರಗಳನ್ನು ಕೇಳುವ ಪ್ರವೃತ್ತಿಗೆ ಕೊನೆ ಹಾಡಲು ಈ ನಿರ್ಧಾರಕ್ಕೆ ಬರಲಾಗಿದೆ.

2019ರ ಅಕ್ಟೋಬರ್‌ನಲ್ಲಿ ಚಂಡೀಗಡದಲ್ಲಿ ನಡೆದಿದ್ದ ನಿರ್ದೇಶಕ ಮಂಡಳಿ ಸಭೆಯ ವಿವರಗಳನ್ನು ಈಗ ಬಹಿರಂಗಪಡಿಸಿ ಈ ನಿರ್ಧಾರವನ್ನು ಕಾರ್ಯಗತಗೊಳಿಸುವುದಕ್ಕೆ ಚಾಲನೆ ನೀಡಿದೆ.

ನಿರ್ದೇಶಕ ಮಂಡಳಿ ಸಭೆಯಲ್ಲಿ ಚರ್ಚೆಗೆ ಬರುವ ವಿಷಯಗಳು ಸಾರ್ವಜನಿಕವಾಗಿ ಹೆಚ್ಚು ಆಸಕ್ತಿದಾಯಕವಾಗಿರುತ್ತವೆ. ಹೀಗಾಗಿ ಇನ್ನು ಮುಂದೆ ಸಭೆಯ ವಿವರಗಳನ್ನು ಆರ್‌ಟಿಐ ಕಾಯ್ದೆ ಪ್ರಕಾರ ಬ್ಯಾಂಕ್‌ನ ಅಂತರ್ಜಾಲ ತಾಣದಲ್ಲಿ  ಪ್ರಕಟಿಸಲಾಗುವುದು. ಸಭೆಯ ಕಲಾಪಗಳನ್ನು ಮುಂದಿನ ಸಭೆಯಲ್ಲಿ ದೃಢಪಡಿಸಿದ ಎರಡು ವಾರಗಳಲ್ಲಿ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ.

ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು ಅಧಿಕಾರವಹಿಸಿಕೊಂಡ ನಂತರ ಆರ್‌ಬಿಐನ ಕಾರ್ಯವೈಖರಿಯಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು