ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಿಷ್ಠ ಮೊತ್ತದ ಹೊಸ ಗೃಹ ಸಾಲದ ಬಡ್ಡಿದರ ಇಳಿಕೆ ನಿರೀಕ್ಷೆ

ಅಧಿಕ ಮೊತ್ತದ ಸಾಲ ಪಡೆಯುವವರಿಗೆ ಹೆಚ್ಚು ಅನುಕೂಲ
Last Updated 10 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಮುಂಬೈ: ಗೃಹ ಸಾಲ ನೀಡುವುದಕ್ಕೆ ಸಂಬಂಧಿಸಿದಂತೆ ಇರುವ ನಿಯಮದಲ್ಲಿ ಆರ್‌ಬಿಐ ಬದಲಾವಣೆ ಮಾಡಿದೆ. ಇದರಿಂದಾಗಿ ಗರಿಷ್ಠ ಮೊತ್ತದ ಗೃಹ ಸಾಲಗಳ ಬಡ್ಡಿದರದಲ್ಲಿ ಇಳಿಕೆ ಆಗಲಿದೆ ಎನ್ನುವುದು ತಜ್ಞರ ಅಭಿಪ್ರಾಯ.

2022ರ ಮಾರ್ಚ್‌ 31ರವರೆಗೆ ನೀಡುವ ಹೊಸ ಗೃಹ ಸಾಲಗಳನ್ನು ಲೋನ್‌ ಟು ವ್ಯಾಲ್ಯು (ಅಪಾರ್ಟ್‌ಮೆಂಟ್‌ನ ಮೌಲ್ಯ ಮತ್ತು ಸಾಲದ ಅನುಪಾತ- ಎಲ್‌ಟಿವಿ) ಜತೆಗೆ ಮಾತ್ರ ಜೋಡಿಸಲು ಆರ್‌ಬಿಐ ನಿರ್ಧರಿಸಿದೆ. ಈ ಮೂಲಕ ಸಾಲ ವಸೂಲಾತಿ ನಿರ್ವಹಣೆಯಲ್ಲಿ ಎದುರಾಗಬಹುದಾದ ಅಪಾಯವನ್ನು ತಗ್ಗಿಸುವ ಉದ್ದೇಶವನ್ನು ಹೊಂದಿದೆ.

ಎಲ್‌ಟಿವಿ ಶೇ 80 ಅಥವಾ ಅದಕ್ಕಿಂತಲೂ ಕಡಿಮೆ ಇದ್ದರೆ, ಬ್ಯಾಂಕ್‌ಗಳು ತೆಗೆದಿರಿಸಬೇಕಾದ ಮೊತ್ತದ ಪ್ರಮಾಣ ಶೇ 35ರಷ್ಟು ಇರಲಿದೆ. ಅದೇ ರೀತಿ ಎಲ್‌ಟಿವಿ ಶೇ 80–90ರ ನಡುವೆ ಇದ್ದರೆ ಅಥವಾ ಅದಕ್ಕೆ ಸಮನಾಗಿದ್ದರೆ ಬ್ಯಾಂಕ್‌ಗಳು ತೆಗೆದಿರಿಸಬೇಕಾದ ಮೊತ್ತದ ಪ್ರಮಾಣ ಶೇ 50ರಷ್ಟಾಗಲಿದೆ ಎಂದು ಆರ್‌ಬಿಐ ಹೇಳಿದೆ.

ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಗೃಹ ಸಾಲ ನೀಡುವಾಗ ಭವಿಷ್ಯದಲ್ಲಿ ಸಾಲ ವಸೂಲಾಗದೇ ಇದ್ದರೆ, ಅದನ್ನು ಸರಿದೂಗಿಸಲು ಒಂದಷ್ಟು ಮೊತ್ತವನ್ನು ತೆಗೆದಿರಿಸುವುದು ನಿಯಮ. ಗೃಹ ಸಾಲ ನೀಡುವಾಗ ಬ್ಯಾಂಕ್‌ಗಳು ಎರಡು ಅಂಶಗಳ ಮೇಲೆ ಎಷ್ಟು ಮೊತ್ತವನ್ನು ತೆಗೆದಿರಿಸಬೇಕು ಎನ್ನುವುದನ್ನು ಲೆಕ್ಕಹಾಕುತ್ತವೆ. ಮೊದಲನೆಯದು ನೀಡಲಾದ ಸಾಲದ ಮೊತ್ತ. ಎರಡನೇಯದು ಆಸ್ತಿ ಮೌಲ್ಯಕ್ಕೆ ಹೋಲಿಸಿ ಎಷ್ಟು ಪ್ರಮಾಣದ ಸಾಲ ನೀಡಲಾಗಿದೆ ಎನ್ನುವುದು. ಇದನ್ನು ಸಾಲ ಮತ್ತು ಆಸ್ತಿ ಮೌಲ್ಯದ ಅನುಪಾತ (ಎಲ್‌ಟಿವಿ) ಎಂದೂ ಕರೆಯ
ಲಾಗುತ್ತದೆ.

‘₹ 75 ಲಕ್ಷಕ್ಕಿಂತ ಅಧಿಕ ಮೊತ್ತದ ಗೃಹ ಸಾಲ ಪಡೆಯುವವರಿಗೆ ಆರ್‌ಬಿಐನ ನಿರ್ಧಾರದಿಂದ ಅನುಕೂಲ ಆಗಲಿದೆ’ ಎಂದು ಆಧಾರ್‌ ಹೌಸಿಂಗ್ ಫೈನಾನ್ಸ್‌ನ ಸಿಇಒ ಡಿಯೊ ಶಂಕರ್‌ ತ್ರಿಪಾಠಿ ಹೇಳಿದ್ದಾರೆ.

ವಸತಿ ವಲಯದ ಬೇಡಿಕೆ ಹೆಚ್ಚಿಸಲು ಮತ್ತು ಉದ್ಯೋಗ ಸೃಷ್ಟಿಸಲು ಪೂರಕವಾದ ನಿರ್ಧಾರವನ್ನು ಆರ್‌ಬಿಐ ತೆಗೆದುಕೊಂಡಿದೆ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT