ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಣಸಿನಕಾಯಿ ಆವಕದಲ್ಲಿ ಮತ್ತೆ ಹೆಚ್ಚಳ: ಕಡ್ಡಿ ಮೆಣಸಿನಕಾಯಿಗೆ ದಾಖಲೆ ದರ

Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಬ್ಯಾಡಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ 13,417 ಕ್ವಿಂಟಲ್ (53,669ಚೀಲ) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ತುಸು ಹೆಚ್ಚಳವಾಗಿದೆ.

ಕಳೆದ ಗುರುವಾರ ಮಾರುಕಟ್ಟೆಗೆ 12,942 ಕ್ವಿಂಟಲ್ (51,765 ಚೀಲ) ಮೆಣಸಿನಕಾಯಿ ಆವಕವಾಗಿತ್ತು. ತೇವಾಂಶ ಹೆಚ್ಚಿರುವ 272 ಲಾಟ್ ಗಳಿಗೆ ಟೆಂಡರ್ ನಮೂದಿಸಿಲ್ಲ. 2 ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್ ಗೆ ₹62,399ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿದ್ದು ಕಳೆದ ಸೋಮವಾರಕ್ಕಿಂತ ₹2 ಸಾವಿರ ಇಳಿಕೆಯಾಗಿದೆ.

4 ಚೀಲ ಕಡ್ಡಿ ಮೆಣಸಿನಕಾಯಿ ₹70,080 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿದ್ದು, ಕಳೆದ ಗುರುವಾರಕ್ಕಿಂತ ₹ 5 ಸಾವಿರ ಹೆಚ್ಚಳವಾಗಿದೆ. ಮೊದಲ ಬಾರಿಗೆ ಕಡ್ಡಿ ಮೆಣಸಿನಕಾಯಿ ದಾಖಲೆಯ ದರದಲ್ಲಿ ಮಾರಾಟವಾಗಿದೆ. ಗುಂಟೂರ ತಳಿ ಮೆಣಸಿನಕಾಯಿ ₹19,289ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿದ್ದು ಸ್ಥಿರತೆ ಕಾಯ್ದುಕೊಂಡಿದೆ.

ಸರಾಸರಿ ಬೆಲೆಯಲ್ಲಿ ಬ್ಯಾಡಗಿ ಡಬ್ಬಿ ₹ 43,699 ಕಡ್ಡಿ ₹44,509 ಹಾಗೂ ಗುಂಟೂರ ತಳಿ ₹16,209 ರಂತೆ ಮಾರಾಟವಾಗಿದೆ. ಗುರುವಾರದ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 292 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT